ಬಾಯ್ ಫ್ರೆಂಡ್ ಜೊತೆಗಿನ ಸಂಬಂಧಕ್ಕೆ ಆಕ್ಷೇಪ: ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ 10ನೇ ತರಗತಿ ವಿದ್ಯಾರ್ಥಿನಿ

Views: 148
ಕನ್ನಡ ಕರಾವಳಿ ಸುದ್ದಿ: ಮಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ತಾಯಿಯೇ ತನ್ನ ಜೀವ ಕಳೆದುಕೊಂಡಿದ್ದಾಳೆ. ಇದಕ್ಕಿಂತ ದಾರುಣ ಕೃತ್ಯ ಮತ್ತೊಂದಿಲ್ಲ.
10ನೇ ತರಗತಿ ಓದುತ್ತಿರುವ ಮಗಳೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಹೈದರಾಬಾದ್ ಜೆಡಿಮೆಟ್ಲಾ ಪ್ರದೇಶದ ಎನ್‌ಎಲ್‌ಬಿ ನಗರದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ.
ತನ್ನ 19 ವರ್ಷದ ಬಾಯ್ ಫ್ರೆಂಡ್ ಹಾಗೂ ಆತನ ಕಿರಿಯ ಸೋದರನ ಜೊತೆ ಸೇರಿಕೊಂಡು ತಾಯಿಯನ್ನು ಮಗಳು ಮುಗಿಸಿದ್ದಾಳೆ.
ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ 8 ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 19 ವರ್ಷದ ಯುವಕನ ಪರಿಚಯವಾಗಿದೆ. ಬಳಿಕ ಆತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ವಿಷಯ ಯುವತಿಯ ತಾಯಿಗೆ ಗೊತ್ತಾಗಿದೆ. ತಾಯಿ, ಅಪ್ರಾಪ್ತ ಮಗಳು ಯುವಕನ ಜೊತೆ ಸಂಬಂಧ ಬೆಳೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮನೆಯಲ್ಲಿ ತಾಯಿ- ಮಗಳ ನಡುವೆ ಜಗಳಕ್ಕೆ ಕಾರಣವಾಗಿದೆ.
ಜೂನ್ 23 ರಂದು ಅಪ್ರಾಪ್ತ ವಿದ್ಯಾರ್ಥಿನಿಯ ತಾಯಿ ಅಂಜಲಿಯನ್ನು ಮಗಳೇ ಮುಗಿಸಿದ್ದಾಳೆ. ಈ ವೇಳೆ ಬಾಯ್ ಫ್ರೆಂಡ್ ಹಾಗೂ ಆತನ ಸೋದರ ಕೂಡ ಮನೆಯಲ್ಲಿದ್ದು ಮಹಿಳೆಯ ಕುತ್ತಿಗೆ ಹಿಸುಕಿದ್ದಾರೆ. ಬಳಿಕ ಐರನ್ ರಾಡ್ನಿಂದ ಹೊಡೆದಿದ್ದಾರೆ. ಜೊತೆಗೆ ಚಾಕುವಿನಿಂದ ಅಂಜಲಿಗೆ ಇರಿದಿದ್ದಾರೆ. ಹೈದರಾಬಾದ್‌ನ ಜೆಡಿಮೆಟ್ಲಾ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.