ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಹೊಸ ಲುಕ್ ನೋಡಿ ನೆಟ್ಟಿಗರು ಫುಲ್ ಶಾಕ್!

Views: 160
ಕನ್ನಡ ಕರಾವಳಿ ಸುದ್ದಿ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಲುಕ್ಕೇ ಬದಲಾಗಿ ಹೋಗಿದೆ.
ಬಿಗ್ಬಾಸ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಚೈತ್ರಾ ಕುಂದಾಪುರ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ.
ಹೌದು, ಬಿಗ್ಬಾಸ್ನಿಂದ ಆಚೆ ಬಂದ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರು ಸಖತ್ ಚೇಂಚ್ ಆಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್ ಆಗಿ ಇರುತ್ತಿದ್ದರು.
ಆದ್ರೆ, ಬಿಗ್ಬಾಸ್ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ದಿನೇ ದಿನೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.
ಆದ್ರೆ ಈ ಬಾರಿ ನೇರಳೆ ಬಣ್ಣದ ಸೀರೆಯನ್ನು ತೊಟ್ಟು, ಕಣ್ಣಿಗೆ ಕೂಲಿಂಗ್ ಕ್ಲಾಸ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾ ಚೈತ್ರಾ ಕುಂದಾಪುರ. ಇದೇ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಈ ವಿಡಿಯೋಗೆ ಕಾಮೆಂಟ್ಸ್ ಹಾಕಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಒಬ್ಬ ಅಭಿಮಾನಿ ಕರ್ನಾಟಕದ ಕ್ರಶ್ ಚೈತ್ರಕ್ಕ ಅಂತ ಕಾಮೆಂಟ್ ಮಾಡಿದ್ದಾನೆ. ಬೆಂಕಿ ಬಿಡಿ ನೀವು ಮೇಡಂ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅಕ್ಕ, ಸೂಪರ್, ಬೆಂಕಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.