ಯುವಜನ

ಪ್ರೀತಿ ನಿರಾಕರಣೆ ಮಾಡಿದ ಯುವಕನ ಸಂಕಷ್ಟಕ್ಕೆ ಸಿಕ್ಕಿಸಲು ಶಾಲಾ -ಕಾಲೇಜುಗಳಿಗೆ ಬಾಂಬ್ ಬೆದರಿಕೆ ಯುವತಿ ಸೆರೆ

Views: 139

ಕನ್ನಡ ಕರಾವಳಿ ಸುದ್ದಿ:  ಪ್ರೀತಿ ನಿರಾಕರಿಸಿದ ಯುವಕನ ವರ್ತನೆಯಿಂದ ಬೇಸತ್ತು ನಗರದ ಶಾಲಾ-ಕಾಲೇಜುಗಳಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ನ್ನು ಉತ್ತರ ವಿಭಾಗದ ಸೆನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಿಯಕರನಿಂದ ಪ್ರೇಮ ವಂಚನೆಗೊಳಗಾದ ಚೆನ್ನೈನ ವಿಮಾನ ನಿಲ್ದಾಣ ರಸ್ತೆ ಸಾಫ್ಟ್‌ವೇರ್ ಎಂಜಿನಿಯರ್ ರೆನಿ ಜೊಶೀಲ್ಡಾ(30) ಬಂಧಿತ ಆರೋಪಿಯಾಗಿದ್ದಾಳೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಇ ಎಲೆಕ್ಟ್ರಿಕಲ್ ಮುಗಿಸಿ ಹಿಂದೆ ಡೆಲಿಟ್ ಕಂಪನಿ ಬಿ ಯಲ್ಲಿ ಕೆಲಸ ಮಾಡುತ್ತಿದ್ದಳು,ಕಂಪನಿಯ ಕೆಲಸ ಬಿಟ್ಟು ಗುಜರಾತ್ ನಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.

ಬಂಧಿತ ಆರೋಪಿಯು ಗುಜರಾತ್ ಅಹಮದಾಬಾದ್ ಕೇಂದ್ರ ಕಾರಾಗೃಹದಲ್ಲಿದ್ದುಕೊಂಡು ನಗರದ ಶಾಲಾ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಳು.

ಖಾಸಗಿ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿಯಾಗಿದ್ದ ಆರೋಪಿಯು ನಗರದ ಪಬ್ಲಿಕ್ ಶಾಲೆಯೊಂದಕ್ಕೆ ಇಮೇಲ್ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು.

ಕಳೆದ ಜೂ.14 ರಂದು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗೆ ಬಾಂಬ್ ಬೆದರಿಕೆ ಕರೆಬಂದಿತ್ತು. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣವನ್ನು ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆರೋಪಿಯು ವಿಪಿಎನ್, ಇಂಟರನೆಟ್ ಬಳಕೆ ಮಾಡುತ್ತಿದ್ದಳು. ಗೇಟ್ ಕೋಡ್ ಎಂಬ ಅಪ್ಲೀಕೇಶನ್‌ನ ವರ್ಚುವಲ್ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಸುಮಾರು ಆರರಿಂದ ಏಳು ವಾಟ್ಸಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಳು.

ಬಾಡಿ ವಾರೆಂಟ್ ಮುಖಾಂತರ ಗುಜರಾತ್‌ನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಕಲಾಸಿಪಾಳ್ಯ ಸೇರಿ ಇತರೆ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾಳೆ.

ಆರೋಪಿತಳ ವಿರುದ್ಧ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈನಲ್ಲಿ ಹುಸಿಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದೆ.

ಆಕೆಯ ಪ್ರೀತಿ ನಿರಾಕರಣೆ ಮಾಡಿದ ಯುವಕನ ಸಂಕಷ್ಟಕ್ಕೆ ಸಿಕ್ಕಿಸಲು ಈ ಕೃತ್ಯ ಎಸಗಿದ್ದಾಳೆ. ಯುವಕನ ಇಮೇಲ್ ಐಡಿ ಬಳಸಿಕೊಂಡು ಹುಸಿಬಾಂಬ್ ಇಮೇಲ್ ಬೆದರಿಕೆ ಕಳಿಸಿದ್ದಳು. ಯುವಕನನ್ನ ಪದೇ ಪದೇ ಪ್ರೀತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಳು.

ಆಕೆಯ ಪ್ರೀತಿ ಮತ್ತು ಗೆಳೆತನವನ್ನು ಯುವಕ ನಿರಾಕರಿಸಿದ್ದ. ಇದೇ ದ್ವೇಷಕ್ಕೆ ಆತನ ಹೆಸರಲ್ಲಿ ಹುಸಿಬಾಂಬ್ ಬೆದರಿಕೆ ಕಳುಹಿಸಿದ್ದಾಳೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಆರರಿಂದ ಏಳು ಶಾಲೆಗಳಿಗೆ ಹುಸಿಬಾಂಬ್ ಇಮೇಲ್ ಮಾಡಿದ್ದಳು. ಅಷ್ಟೇ ಅಲ್ಲದೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಾಂಬ್ ಬೆದರಿಕೆ ಹಾಕಿದ್ದಳು. ಗುಜರಾತ್‌ನ ವಿಮಾನ ದುರಂತದ ಹಾಗೆ ನಿಮ್ಮ ಶಾಲೆಗಳನ್ನು ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಳು. ಸದ್ಯ ಕೂಲಂಕುಷವಾಗಿ ಆರೋಪಿತೆಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ತಿಳಿಸಿದರು.

Related Articles

Back to top button
error: Content is protected !!