ಯುವಜನ

ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತ ವಯಸ್ಸಿನ ಮಗಳು ಬಾಯ್ ಫ್ರೆಂಡ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದಳು!

Views: 156

ಕನ್ನಡ ಕರಾವಳಿ ಸುದ್ದಿ:ಅಪ್ರಾಪ್ತ ವಯಸ್ಸಿನ ಮಗಳು ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ಹೆತ್ತ ತಾಯಿಯನ್ನೇ ಹತ್ಯೆಗೈದ್ದಿರುವ ಅಮಾನುಷ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಅಪ್ರಾಪ್ತ ಮಗಳೇ ತನ್ನ ತಾಯಿ ನೇತ್ರಾವತಿಯನ್ನು ಹತ್ಯೆಗೈದಿದ್ದಾಳೆ. ಮಗಳು ಚಿಕ್ಕ ವಯಸ್ಸಿನಲ್ಲಿ ಪ್ರೀತಿ, ಗೀತಿ ಅಂತ ಹುಡುಗನ ಜೊತೆ ಓಡಾಡುವುದನ್ನು ನೋಡಿದ ತಾಯಿ ಮಗಳಿಗೆ ಬುದ್ದಿವಾದ ಹೇಳಿದ್ದಾಳೆ. ತಾಯಿ ಬುದ್ದಿಮಾತು ಹೇಳಿದ್ದಕ್ಕೆ ತಾಯಿಯನ್ನೇ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಹತ್ಯೆಗೈದ್ದಿದ್ದಾಳೆ. ನೇತ್ರಾವತಿಯ ಮಗಳ ಜೊತೆ ಸೇರಿ ಕೊಲೆಗೈದ ಆರೋಪದ ಮೇಲೆ ಪೊಲೀಸರು ಈಗ ಐವರನ್ನು ಬಂಧಿಸಿದ್ದಾರೆ.

ಕಳೆದ ಶನಿವಾರವೇ ನೇತ್ರಾವತಿಯನ್ನು ಆಕೆಯ ಅಪ್ರಾಪ್ತ ಮಗಳು ಹಾಗೂ ಉಳಿದ ನಾಲ್ಕು ಮಂದಿ ಅಪ್ರಾಪ್ತ ಹುಡುಗರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಬೆಂಗಳೂರಿನ ಸುಬ್ರಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಈ ಕೊಲೆ ನಡೆದಿತ್ತು. ನೇತ್ರಾವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಳಿಕ ನೇಣು ಹಾಕಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ನೇತ್ರಾವತಿ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ಆದರೇ, ನೇತ್ರಾವತಿಯ ಶವ ಸಂಸ್ಕಾರ ಆದ ಬಳಿಕ ಮಗಳು ಮನೆಯಲ್ಲಿ ಇರಲಿಲ್ಲ. ತನ್ನ ತಂಗಿ ಸಾವಿನ ಬಳಿಕ ಮಗಳು ಎಲ್ಲೂ ಕಾಣಿಸುತ್ತಿಲ್ಲ ಎಂದು ನೇತ್ರಾವತಿಯ ಅಕ್ಕ ಅನಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನೇತ್ರಾವತಿ ಸಾವನ್ನಪ್ಪಿದ 2 ದಿನದ ಬಳಿಕ ಮಗಳು ಮನೆಗೆ ವಾಪಸ್ ಬಂದಿದ್ದಳು. ನಾನು ಅವತ್ತು ತಾಯಿ ಮನೆಗೆ ಹೋಗಿದ್ದೆ. ಐದು ಜನ ಸ್ನೇಹಿತರನ್ನು ಗಮನಿಸಿದೆ. ಟವಲ್ ನಲ್ಲಿ ಕುತ್ತಿಗೆ ಬಿಗಿದು ನೇಣು ಹಾಕಿದ್ದನ್ನು ನೋಡಿದ್ದೆ. ನಂತರ ನನಗೆ ಬೆದರಿಕೆ ಹಾಕಲಾಗಿತ್ತು. ಭಯಪಟ್ಟು ಫ್ರೆಂಡ್ಸ್ ಮನೆಗೆ ತೆರಳಿದ್ದೆ ಎಂದು ಮಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಳು.

ಆದರೇ, ಪೊಲೀಸರಿಗೆ ಅನುಮಾನ ಬಂದು, ವಿಚಾರಣೆ ನಡೆಸಿದಾಗ, ತಾಯಿ ನೇತ್ರಾವತಿಯನ್ನು ಅಪ್ರಾಪ್ತ ಮಗಳೇ ತನ್ನ ಬಾಯ್ ಫ್ರೆಂಡ್ ಹಾಗೂ ಉಳಿದವರ ಜೊತೆ ಸೇರಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳೇ ತಾಯಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

 

 

 

Related Articles

Back to top button
error: Content is protected !!