ಯುವಜನ

ಪ್ರೀತಿಗೆ ಮನೆಯವರ ಆಕ್ಷೇಪ, ಯುವತಿ ನಾಪತ್ತೆ

Views: 90

ಕನ್ನಡ ಕರಾವಳಿ ಸುದ್ದಿ:ಪ್ರೀತಿಗೆ ಮನೆಯವರ ಆಕ್ಷೇಪಿಸಿದ್ದರಿಂದ ಸುರತ್ಕಲ್ ಕೃಷ್ಣಾಪುರ ನಿವಾಸಿ 20 ವರ್ಷದ ಯುವತಿ ಅನನ್ಯ ಎಂಬಾಕೆ ಕಾಣೆಯಾಗಿದ್ದಾಳೆ.

ಯುವತಿ ಅನನ್ಯ ಕಾರ್ತಿಕ್ ಎಂಬಾತನನ್ನು ಪ್ರೀತಿಸುತ್ತಿದ್ದು, ಮನೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಕೆ ಮನೆಯಲ್ಲೇ ಇದ್ದಳು. ಅಕ್ಟೋಬರ್ 25 ರಂದು ತಂದೆ ತಾಯಿ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪುತ್ರಿ ಅನನ್ಯ ಇರಲಿಲ್ಲ.

ಆಸುಪಾಸಿನ ಮನೆಯವರ ಬಳಿ ವಿಚಾರಿಸಿದಾಗ ಅನನ್ಯ ಬೆಳಿಗ್ಗೆ ಮನೆಯಿಂದ ಹೋಗಿರುವುದಾಗಿ ತಿಳಿದು ಬಂದಿದೆ.

ಕಾಣೆಯಾಗಿರುವ ಯುವತಿ 5.3 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ, ದಪ್ಪ ಸೈಝ್ ಕನ್ನಡಕ ಮತ್ತು ಕಾಣೆಯಾದ ದಿನ ಕೆಂಪು ಬಣ್ಣದ ಟೀ ಶರ್ಟ್, ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದಳು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾಳೆ. ಆಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಸುರತ್ಕಲ್ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!