ಯುವಜನ

ಪ್ರೀತಿಗಾಗಿ ಮನೆ ಬಿಟ್ಟು ಓಡಿ ಹೋಗಿ ವಿವಾಹವಾದ ಯುವತಿಯರು!

Views: 208

ಕನ್ನಡ ಕರಾವಳಿ ಸುದ್ದಿ: ಪಶ್ಚಿಮ ಬಂಗಾಳದ ಸುಂದರ್‌ಬನ್ಸ್‌ನ ಇಬ್ಬರು ಯುವತಿಯರು ಪ್ರೀತಿಸಿ ಮದುವೆಯಾಗಿದ್ದಾರೆ.

ರಿಯಾ ಸರ್ದಾರ್ ಮತ್ತು ರಾಖಿ ರಾಖಿ ನಾಸ್ಕರ್ ಮದುವೆಯಾದ ಯುವತಿಯರು.

ಮಂಗಳವಾರ ನೆರೆಹೊರೆಯವರ ಸಹಾಯದಿಂದ ಇಬ್ಬರೂ ಹಸೆಮಣೆ ಏರಿದರು. ರಿಯಾ ಅವರು ದಕ್ಷಿಣ 24 ಪರಗಣ ಜಿಲ್ಲೆಯ ಮಂದಿರ ಬಜಾರ್ ಪ್ರದೇಶದ ನಿವಾಸಿಯಾದರೆ, ರಾಖಿ ಇದೇ ಜಿಲ್ಲೆಯ ಬಕುಲ್ತಲಾ ನಿವಾಸಿ.

ರಾಖಿಯ ಪೋಷಕರು ಸಲಿಂಗ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ರಿಯಾ ಅವರ ಕುಟುಂಬ ಒಪ್ಪಿಗೆ ನೀಡಿದೆ. ಹಾಗಾಗಿ ರಾಖಿ ತನ್ನ ಪ್ರೀತಿಗಾಗಿ ಇತ್ತೀಚೆಗೆ ಮನೆ ಬಿಟ್ಟು ಓಡಿ ಬಂದಿದ್ದರು. ಇದನ್ನು ತಿಳಿದ ರಿಯಾ ಮತ್ತು ಆಕೆಯ ಕುಟುಂಬ ನೆರೆಹೊರೆಯವರೊಂದಿಗೆ ಸ್ಥಳೀಯ ಕ್ಲಬ್‌ವೊಂದರ ಜೊತೆ ಮಾತನಾಡಿದ್ದರು. ಅದರಂತೆ ಸ್ಥಳೀಯರು ದೇವಾಲಯದಲ್ಲಿ ಮದುವೆ ನಿಶ್ಚಯಿಸಿದ್ದರು. ಎಲ್ಲರ ಸಮ್ಮುಖದಲ್ಲಿ ರಿಯಾ ಮತ್ತು ರಾಖಿ ಪರಸ್ಪರ ಮಾಲೆ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಸ್ಪರ ಸಿಂಧೂರ ಹಚ್ಚಿಕೊಂಡಿದ್ದಾರೆ.

Related Articles

Back to top button
error: Content is protected !!