ಯುವಜನ
ಪ್ರಿಯತಮೆ ಇನ್ನೊಬ್ಬನೊಂದಿಗೆ ಸಂಬಂಧ ಸಂಶಯಕ್ಕೆ ಹತ್ಯೆ!

Views: 72
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಹೋಟೆಲ್ ರೂಂ ನಲ್ಲಿ ನಡೆದಿದೆ.
ಪೂರ್ಣಪ್ರಜ್ಞಾ ಲೇಔಟ್ ನ ಓಯೋ ಹೋಟೆಲ್ ರೂಂ ನಲ್ಲಿ ಈ ಘಟನೆ ನಡೆದಿದೆ. ಹರಿಣಿ (36) ಕೊಲೆಯಾಗಿರುವ ಪ್ರಿಯತಮೆ. ಟೆಕ್ಕಿ ಯಶಸ್ ಯುವತಿಯನ್ನು ಕೊಂದ ಆರೋಪಿ.
ಇಬ್ಬರೂ ಕೆಂಗೇರಿ ನಿವಾಸಿಗಳು. ಪೂರ್ಣಪ್ರಜ್ಞಾ ಲೇಔಟ್ ನ ಓಯೋ ಹೋಟೆಲ್ ನಲ್ಲಿ ರೂಂ ಪಡೆದಿದ್ದರು. ಪ್ರಿಯತಮೆ ಮತ್ತೊಂದು ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಯಶಸ್ ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.