ಜನಮನ

ಪ್ರಿಯಕರನಿಗಾಗಿ ಪತಿಗೆ ವಿಷವಿಟ್ಟಿದ್ದ ಪಾತಕಿ ಪತ್ನಿ.. ಸತ್ಯ ಶೋಧನೆಗೆ ಬೆನ್ನತ್ತಿದ್ದ ಪೊಲೀಸರು!

Views: 186

ಕನ್ನಡ ಕರಾವಳಿ ಸುದ್ದಿ: ಪ್ರಿಯಕರನಿಗಾಗಿ ಪತಿಗೆ ವಿಷವಿಟ್ಟಿದ್ದ ಪಾತಕಿ ಪತ್ನಿಯ ಸತ್ಯ ಶೋಧನೆಗೆ ಬೆನ್ನತ್ತಿದ್ದ ಪೊಲೀಸರು ವಿಷದ ಬಾಟಲಿಯಿಂದ ಹಿಡಿದು ಆತನ ಮೂಳೆ ಎಲ್ಲವನ್ನೂ ತಲಾಶ್ ಮಾಡುತ್ತಿದ್ದಾರೆ.

ಜ್ವರ ಅಂತ ಆಸ್ಪತ್ರೆ ಸೇರಿದ್ದ ಬಾಲಕೃಷ್ಣ ಪೂಜಾರಿ ಕಳೆದ ಅಕ್ಟೋಬರ್ 20ನೇ ತಾರೀಕು ಚಿಕಿತ್ಸೆ ಫಲಕಾರಿಯಾಗದೇ ಬಾಲಕೃಷ್ಣ ಸಾವನ್ನಪ್ಪಿದ್ದಾರೆ.    ಭಾವನ ಅನ್ಯಾಯದ ಸಾವು ಕಂಡ ಪ್ರತೀಮಾ ಸಹೋದರ ಅಕ್ಕನನ್ನು ಹಿಡಿದು ಕೊಡುವಲ್ಲಿ ಸಹಾಯ ಮಾಡಿದ್ದ ಪ್ರತೀಮಾಳ ಕರಾಳ ಮುಖ ಬಿಚ್ಚಿಟ್ಟು ಅಂದರ್ ಮಾಡಿಸಿದ್ದ. ಈಗ ಪೊಲೀಸರು ಈ ಪ್ರತೀಮಾ ಗಂಡನಿಗೆ ಉಣಿಸಿದ ವಿಷದ ಮೂಲದ ಹಿಂದೆ ಬಿದ್ದಿದ್ದಾರೆ.

ಪ್ರಿಯಕರನ ಜೊತೆ ಸೇರಿ ಪತಿಯ ಕತೆ ಮುಗಿಸಿದ ಪ್ರತೀಮಾಳನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ಈಗ ಈ ಕೊಲೆಯ ಜಾಡನ್ನು ಬೇದಿಸೋದಕ್ಕೆ ಮುಂದಾಗಿದ್ದಾರೆ. ಹತ್ಯೆಯಾಗಿರುವ ಬಾಲಕೃಷ್ಣ ಪೂಜಾರಿ ತಂದೆ ಅನುಮತಿ ಪಡೆದು ಬಾಲಕೃಷ್ಣ ಪೂಜಾರಿ ಮೂಳೆಯನ್ನು ಸಂಗ್ರಹಿಸಿಸಿದ್ದಾರೆ.ಉತ್ತರ ಕ್ರಿಯೆ ನಡೆಸಿದ ಜಾಗದಿಂದ ಎರಡು ಮೂಳೆ ತುಂಡಗಳನ್ನು ಸಂಗ್ರಹ ಮಾಡಿದ್ದು ಮೂಳೆಯಲ್ಲಿ ವಿಷದ ರಾಸಾಯನಿಕ ಅಂಶಗಳಿರುವ ಸಾಧ್ಯತೆಯಿದೆ.

ಇನ್ನು ವಿಷದ ಬಾಟಲಿ ಎಸೆದ ಸ್ಥಳದಲ್ಲಿ ಹತ್ಯೆಗೆ ಬಳಸಿದ್ದ ಬಾಟಲಿಯನ್ನು ಸಹ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಆರ್ಸೆನಿಕ್ ಟ್ರಯಾಕ್ಸೈಡ್ ಎಂಬಾ ವಿಷದ ಬಾಟಲಿಯ ಶೋಧ ಮಾಡ್ತಿದ್ದಾರೆ. ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಬಳಿ ಮಹಜರು ನಡೆಸಿದ್ದಾರೆ. ಆರೋಪಿ ದಿಲೀಪ್ ಪ್ರತಿಮಾ ಬ್ಯೂಟಿ ಪಾರ್ಲರ್ ಬಳಿ ವಿಷದ ಬಾಟಲಿ ನೀಡಿದ್ದ. ಅಜೆಕಾರು ಪೇಟೆ ಬಳಿಯ ಪ್ರತಿಮಾಸ್ ಬ್ಯೂಟಿ ಲಾಂಜ್ ಇತ್ತು. ಈ ಜಾಗದಲ್ಲೂ ಪೊಲೀಸರು ಮಹಜರು ನಡೆಸಿದ್ದಾರೆ.

ಅಜೆಕಾರು ಪೊಲೀಸರು ಸದ್ಯ ಪಾಯಿಸನ್ ಪ್ರತೀಮಾಳ ಕೇಸ್ ನ್ನು ತನಿಖೆ ನಡೆಸ್ತಿದ್ದು, ಸಾಕ್ಷಿಗಳನ್ನ ಕಲೆ ಹಾಕ್ತಿದ್ದಾರೆ. ಕೊಲೆ ಜಾಡು ಬೆನ್ನತ್ತಿರುವ ಪೊಲೀಸರಿಗೆ ಇನ್ನೆಷ್ಟು ಸತ್ಯಗಳ ಪರಿಚಯವಾಗುತ್ತೋ ಕಾದು ನೋಡಬೇಕಿದೆ.

Related Articles

Back to top button
error: Content is protected !!