ಜನಮನ

ಪಾಕ್ ಶೆಲ್ ದಾಳಿಗೆ ಯೋದ ಹುತಾತ್ಮ,7ನಾಗರಿಕರು ಬಲಿ,38 ಜನರು ಗಾಯ 

Views: 150

ಕನ್ನಡ ಕರಾವಳಿ ಸುದ್ದಿ:ಪಾಕಿಸ್ತಾನ ಸೈನಿಕರು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು, ಮಧ್ಯರಾತ್ರಿಯ ನಂತರ ಶೆಲ್‌ಗಳು ಮತ್ತು ಮೋರ್ಟಾರ್‌ಗಳನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದವು.

ಬುಧವಾರ ಬೆಳಗಿನ ಜಾವ ನಡೆದ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್‌ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಖಚಿತಪಡಿಸಿದೆ. ಎಲ್‌‍ಒಸಿ ಉದ್ದಕ್ಕೂ ಪಾಕ್‌ ಅಪ್ರಚೋದಿತ ದಾಳಿಗೆ 7 ನಾಗರಿಕರು ಬಲಿ- ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌‍ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯು ಫಿರಂಗಿ ಮತ್ತು ಮೋರ್ಟಾರ್‌ ಶೆಲ್‌ ದಾಳಿಯಿಂದ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Related Articles

Back to top button
error: Content is protected !!