ಇತರೆ

ನ್ಯಾಯಾಲಯದ ಆವರಣದಲ್ಲೇ ಪತಿಯ ಕಾಲರ್ ಹಿಡಿದು ಮನಬಂದಂತೆ ಥಳಿಸಿದ ವಿಚ್ಛೇದನ ಪತ್ನಿ!

Views: 107

ಕನ್ನಡ ಕರಾವಳಿ ಸುದ್ದಿ:  ಕೌಟುಂಬಿಕ ನ್ಯಾಯಾಲಯವೊಂದರಲ್ಲಿ  ವಿಚ್ಛೇದನ ಪಡೆದ ದಂಪತಿಗಳ ನಡುವೆ ಆಸ್ತಿ ವಿಚಾರವಾಗಿ ನಡೆದ ಜಗಳ ಬೀದಿಗೆ ಬಂದಿದ್ದು, ಮಹಿಳೆಯೊಬ್ಬಳು ತನ್ನ ಮಾಜಿ ಪತಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಈ ದಂಪತಿಗೆ ಈಗಾಗಲೇ ಕಾನೂನುಬದ್ಧವಾಗಿ ವಿಚ್ಛೇದನ ದೊರೆತಿತ್ತು. ಮಹಿಳೆಯು ತನಗೆ ಜೀವನಾಂಶ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಳು. ಆದರೆ, ತಾಂತ್ರಿಕ ಕಾರಣಗಳಿಂದ ನ್ಯಾಯಾಲಯವು ಅವಳ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದೇ ವೇಳೆ, ಪತಿಯು ತನ್ನ ಹೆಸರಿನಲ್ಲಿದ್ದ ಸಮಸ್ತ ಆಸ್ತಿಯನ್ನು ತನ್ನ ತಾಯಿಯ ಹೆಸರಿಗೆ ವರ್ಗಾಯಿಸಿದ್ದ ಎನ್ನಲಾಗಿದೆ.

ತನಗೆ ಬರಬೇಕಾದ ಆಸ್ತಿ ಅತ್ತೆಯ ಪಾಲಾಗಿದ್ದನ್ನು ಕಂಡು ಆಕ್ರೋಶಗೊಂಡ ಮಹಿಳೆ, ನ್ಯಾಯಾಲಯದ ಆವರಣದಲ್ಲೇ ಪತಿಯ ಕಾಲರ್ ಹಿಡಿದು ಮನಬಂದಂತೆ ಹೊಡೆದಿದ್ದಾಳೆ. ವಿಶೇಷವೆಂದರೆ, ಪತ್ನಿ ಇಷ್ಟೊಂದು ಉಗ್ರವಾಗಿ ವರ್ತಿಸುತ್ತಿದ್ದರೂ, ಪತಿ ಮಾತ್ರ ಯಾವುದೇ ಪ್ರತಿರೋಧ ತೋರದೆ ನಗುತ್ತಲೇ ನಿಂತಿರುವುದು ವಿಶೇಷವಾಗಿತ್ತು.

Related Articles

Back to top button