ಯುವಜನ
ನೀಟ್‌ನಲ್ಲಿ ಶೇ.99.99 ಮಾರ್ಕ್ಸ್ ಪಡೆದ ವಿದ್ಯಾರ್ಥಿ ವೈದ್ಯನಾಗಲು ಬಯಸುವುದಿಲ್ಲ ಎಂದು ಆತ್ಮಹತ್ಯೆ
Views: 321
ಕನ್ನಡ ಕರಾವಳಿ ಸುದ್ದಿ: ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ದಿನವೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ಚಂದ್ರಾಪುರ ಜಿಲ್ಲೆಯ 19 ವರ್ಷದ ಅನುರಾಗ್ ಅನಿಲ್ ಬೋರ್ಕರ್ಚಂ ದ್ರಾಪುರ ಜಿಲ್ಲೆಯ 19 ವರ್ಷದ ಅನುರಾಗ್ ಅನಿಲ್ ಬೋರ್ಕರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ನೀಟ್ ಪರೀಕ್ಷೆಗೆ ಉತ್ತಮ ತಯಾರಿಯನ್ನು ನಡೆಸಿದ್ದ ಅನುರಾಗ್ ನೀಟ್ ಯುಜಿ ಪರೀಕ್ಷೆಯಲ್ಲಿ 99.99 ಶೇಕಡಾ ಅಂಕದೊಂದಿಗೆ ಉತ್ತೀರ್ಣನಾಗಿದ್ದ. ಅಲ್ಲದೆ, ಒಬಿಸಿ ವಿಭಾಗದಲ್ಲಿ 1475 ರ ಅಖಿಲ ಭಾರತ ರ್ಯಾಂಕ್ ಗಳಿಸಿದ್ದ ಎನ್ನಲಾಗಿದೆ.
ನೀಟ್ ನಲ್ಲಿ ಉತ್ತಮ ಫಲಿತಾಂಶ ಪಡೆದ ಬೆನ್ನಲ್ಲೇ ಪೋಷಕರ ಆಸೆಯಂತೆ ಎಂಬಿಬಿಎಸ್ ಕೋರ್ಸ್ ಮಾಡಲು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ.
ಆದರೆ, ಅನುರಾಗ್ ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್ ನೋಟ್ ಕೂಡ ಸಿಕ್ಕಿದ್ದು, “ನಾನು ವೈದ್ಯನಾಗಲು ಬಯಸುವುದಿಲ್ಲ” ಎಂದು ಬರೆದಿದ್ದ ಎಂದು ತಿಳಿದುಬಂದಿದೆ.






