ಇತರೆ
ನಿಧಿ ತೆಗೆದುಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ: ನಕಲಿ ಬಾಬಾ ಅರೆಸ್ಟ್

Views: 39
ಕನ್ನಡ ಕರಾವಳಿ ಸುದ್ದಿ: ನಿಧಿ ತೆಗೆದುಕೊಡುವುದಾಗಿ ನಂಬಿಸಿ ಬರೋಬ್ಬರಿ ₹1 ಕೋಟಿ 87 ಲಕ್ಷ ರೂಪಾಯಿ ವಂಚಿಸಿದ್ದ ನಕಲಿ ಬಾಬಾನನ್ನು ಸೊಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹ್ಮದ್ ಖಾದರ್ ಶೇಖ್ ಎಂದು ಗುರುತಿಸಲಾಗಿದೆ.
ಈತ ನಿಧಿಯ ಆಮಿಷವೊಡ್ಡಿ ಸೊಲ್ಲಾಪುರದ ಹಲವು ಜನರಿಗೆ ಮೋಸ ಮಾಡಿದ್ದು ಆತನನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ.
ಸೊಲ್ಲಾಪುರದ ಗೋವಿಂದ ವಂಜಾರಿ ಎಂಬುವವರ ಜಮೀನಿನಲ್ಲಿ ನಿಧಿ ಇದೆ. ಅದನ್ನು ತೆಗೆದುಕೊಡುವುದಾಗಿ ಮಹ್ಮದ್ ಖಾದರ್ ಶೇಖ್ ನಂಬಿಸಿ ಅವರಿಂದ ಹಣ ಪಡೆದು ವಂಚನೆ ಮಾಡಿದ್ದ. ಈ ಕುರಿತು ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಹೆಚ್ಚುವರಿ ಎಸ್ಪಿ ದತ್ತಾತ್ರೇಯ ಕಾಳೆ ನೇತೃತ್ವದ ತಂಡ ಆರೋಪಿಯ ಪತ್ತೆಗೆ ಬಲೆ ಬೀಸಿತ್ತು.
ಆರೋಪಿಯ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ, ಮಾಟ ಮಂತ್ರಕ್ಕೆ ಉಪಯೋಗಿಸುವ ಹಲವು ಸಾಮಗ್ರಿಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.