ಕರಾವಳಿ

ಮರೆಯಲಾಗದ ತುಳುನಾಡ ರಾಜಧಾನಿ ಬಾರ್ಕೂರಿನ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನ

Views: 302

ಕನ್ನಡ ಕರಾವಳಿ ಸುದ್ದಿ: ಶ್ರೀ ಶಾರದಾ ಕಾಲೇಜು ಬಸ್ರೂರು (ಇತಿಹಾಸ ವಿಭಾಗ ) ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು, ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ, ಗ್ರಾಮ ಪಂಚಾಯತ್ ಬಾರ್ಕೂರು ಗ್ರಾಮ ಪಂಚಾಯತ್ ಹನೆಹಳ್ಳಿ, ಗ್ರಾಮ ಪಂಚಾಯತ್ ಯಡ್ತಾಡಿ,ರೋಟರಿ ಕ್ಲಬ್ ಬಾರ್ಕೂರು, ಬಾರ್ಕೂರು ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್ (ರಿ)ಬಾರ್ಕೂರು, ರಾಜಧಾನಿ ರಾಜ ಯೂತ್ ಕ್ಲಬ್ (ರಿ )ಬಾರ್ಕೂರು ಬಾರ್ಕೂರು ಆನ್ ಲೈನ್ ಡಾಟ್ ಕಾo, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ಮರೆಯಲಾಗದ ತುಳುನಾಡ ರಾಜಧಾನಿ ಬಾರ್ಕೂರಿನ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದ ಅಂಗವಾಗಿ ಪರಂಪರೆ ನಡಿಗೆ ಅಕ್ಟೋಬರ್ 8ರಂದು  ಬಾರ್ಕೂರಿನಲ್ಲಿ ನಡೆಯಿತು

ಬಾರ್ಕೂರು ಮಣಿಗಾರ ಕೇರಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಿವೃತ್ತ ಪ್ರಾಂಶುಪಾಲರು ಉಡುಪಿ ಆರ್ ಆರ್ ಸಿ ನಿರ್ದೇಶಕ ಪ್ರೊ ಬಿ ಜಗದೀಶ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶ್ರೀಮತಿ ಅನುಪಮಾ ಎಸ್ ಶೆಟ್ಟಿ ವಿಶ್ವಸ್ಥ ಮಂಡಳಿ ಸದಸ್ಯರು, ಶ್ರೀ ಶಾರದ ಕಾಲೇಜು ಬಸ್ರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಶಾಂತರಾಮ್ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಾರ್ಕೂರು. ಶ್ರೀ ಶ್ರೀನಿವಾಸ್ ಶೆಟ್ಟಿಗಾರ್ ಆಡಳಿತ ಮೊಕ್ತೇಸರರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರು,ಶ್ರೀ ಪ್ರಕಾಶ್ ಸಿ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಯಡ್ತಾಡಿ, ಶ್ರೀಮತಿ ಮಲ್ಲಿಕಾ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಹನೆಹಳ್ಳಿ, ಪ್ರೊ.ಭಾಸ್ಕರ್ ಶೆಟ್ಟಿ ಸಲ್ವಾಡಿ ಪ್ರಾಂಶುಪಾಲರು ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು.ಡಾ. ಜಯರಾಮ ಶೆಟ್ಟಿಗಾರ್ ವಿಶ್ರಾಂತ ಪ್ರಾಧ್ಯಾಪಕರು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ರೋ. ಕಿಶೋರಿ ಎಸ್ ಶೆಟ್ಟಿ ಅಧ್ಯಕ್ಷರು ರೋಟರಿ ಕ್ಲಬ್ ಬಾರ್ಕೂರು.ಸತೀಶ್ ಎಸ್.ಅಮೀನ್ಅಧ್ಯಕ್ಷರು ಬಾರ್ಕೂರು ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ) ಬಾರ್ಕೂರು, ಪ್ರಾಧ್ಯಾಪಕರು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Related Articles

Back to top button
error: Content is protected !!