ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಪೋಷಕರ ಸಮಿತಿ ರಚನೆ

Views: 186
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26 ಸಾಲಿನ ಪೋಷಕರ ಸಮಿತಿಯನ್ನು ರಚಿಸಲಾಯಿತು.
“ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸದಲ್ಲಿ ಶಾಲೆ ಮತ್ತು ಮನೆ ಎರಡು ಶಕ್ತಿಯಾಗಿ ನಿಲ್ಲಬೇಕು”. ಈ ನಿಟ್ಟಿನಲ್ಲಿ ಪೋಷಕರ ಸಮಿತಿ ಒಂದು ಸೇತುವೆಯಾಗಿದೆ.ಶಿಕ್ಷಕರು ಮತ್ತು ಪೋಷಕರ ನಡುವಿನ ಸಾರ್ಥಕ ಸಂವಾದಕ್ಕೆ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26 ಸಾಲಿನ ಪೋಷಕರ ಸಮಿತಿಯನ್ನು ರಚಿಸಲಾಯಿತು. ಆಯ್ಕೆಯ ಪ್ರಕಾರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಆಯ್ಕೆಯನ್ನು ಚೀಟಿ ಎತ್ತುವುದರ ಮೂಲಕ ನಡೆಸಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಪ್ರೇಮ, ಕಾರ್ಯದರ್ಶಿಯಾಗಿ ಶ್ರೀ ದಿನೇಶ್ ಆಚಾರ್ಯ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ಪೋಷಕರನ್ನು ಉದ್ದೇಶಿಸಿ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯ ಬಗ್ಗೆ ಹಾಗೂ ಸಂಸ್ಥೆಯ ಆಗುಹೋಗುಗಳ ಬಗ್ಗೆ ವಿವರವಾಗಿ ತಿಳಿಸಿದರು. ಹಾಗೂ ಪೋಷಕರ ಸಮಿತಿಯಲ್ಲಿ ಆಯ್ಕೆಗೊಂಡ ಅಧ್ಯಕ್ಷರು ,ಕಾರ್ಯದರ್ಶಿ ಮತ್ತು ಸದಸ್ಯರನ್ನು ಅಭಿನಂದಿಸಿ, ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ರೇಷ್ಮಾ ಅಡಪ ಅವರು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.ಹಾಗೂ ಶಾಲಾ ವಾರ್ಷಿಕೋತ್ಸವದ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಅಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿ ಹಾಗೂ ಶಿಕ್ಷಕ/ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಸಹ ಶಿಕ್ಷಕಿ ಗಗನ ಕಾರ್ಯಕ್ರಮವನ್ನು ನಿರೂಪಿಸಿ ಶ್ರೇಯ ವಂದನಾರ್ಪಣೆ ಗೈದರು.