ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೇನ್ ಹರಿದು ಬೈಕ್ ಸವಾರ ಗಂಭೀರ

Views: 220
ಕನ್ನಡ ಕರಾವಳಿ ಸುದ್ದಿ: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಜಂಕ್ಷನ್‌ನಲ್ಲಿ ಆಯತಪ್ಪಿ ರಸ್ತೆಗೆ ಉರುಳಿದ ಬೈಕ್ ಸವಾರನ ಮೇಲೆ ಕ್ರೇನ್ ಹರಿದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮಣೂರಿನ ಕಂಬಳಗದ್ದೆಬೆಟ್ಟು ನಿವಾಸಿ ಅಭಿಷೇಕ್ ಪೂಜಾರಿ (23) ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ತಿಳಿದು ಬಂದಿದೆ.
ಅಕ್ಟೋಬರ್11ರ ಬೆಳಗ್ಗೆ ಅವರು ಮನೆಯಿಂದ ಕೆಲಸದ ನಿಮಿತ್ತ ಕುಂದಾಪುರದ ಕಡೆಗೆ ಸಾಗುತ್ತಿದ್ದರು.ಆಗ ಬೈಕೊಂದು ಅಡ್ಡಬಂದ ಪರಿಣಾಮ ಅಭಿಷೇಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿದರು.ಅಷ್ಟರಲ್ಲಿಯೇ ಹಿಂದಿನಿಂದ ಅತೀ ವೇಗವಾಗಿ ಬಂದ ಕ್ರೇನ್ ಅವರ ಮೇಲೆಯೇ ಹರಿಯಿತು. ಕೂಡಲೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು.ಕ್ರೇನ್ ಚಾಲಕ ಮೊಬೈಲ್ ಫೋನ್ ಬಳಸಿದ ಕಾರಣ ಆತನಿಗೆ ಬೈಕ್ ಸವಾರ ರಸ್ತೆಗೆ ಉರುಳಿರುವುದು ಗೋಚರವಾಗಲಿಲ್ಲ. ಕ್ರೇನ್‌ನ ಎಡಭಾಗದ ಚಕ್ರ ದೇಹದ ಮೇಲೆ ಹರಿದು ಬಳಿಕ ರಸ್ತೆ ವಿಭಾಜಕವನ್ನು ಏರಿ ನಿಂತಿದೆ.
ಕೋಟ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ