ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ: ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಅಂತಿಮ ವರದಿಗೆ ಸಿದ್ಧತೆ

Views: 124
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಕ್ರೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಅಂತಿಮ ವರದಿ ಸಲ್ಲಿಸಲು ಬೇಕಾದ ತಯಾರಿಯನ್ನು ಎಸ್‌ಐಟಿ ಅಧಿಕಾರಿಗಳು ಮಾಡುತ್ತಿದ್ದಾರೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬುಧವಾರ ದಿಢೀರ್ ಭೇಟಿ ನೀಡಿದ್ದಾರೆ. ಎಸ್‌ಐಟಿ ಪೊಲೀಸ್ ಠಾಣೆಗೆ ಆಗಮಿಸಿದ ಮೊಹಾಂತಿ, ತನಿಖಾಧಿಕಾರಿ ಎಸಿ ಜಿತೇಂದ್ರ ದಯಾಮಾ ಸೇರಿದಂತೆ ಇತರೆ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಕರಣದ ಇಂದಿನವರೆಗಿನ ಪ್ರಗತಿ ವರದಿ ಬಗ್ಗೆ ಪರಿಶೀಲನೆ ಪರಿಶೀಲನೆ ನಡೆದಿದೆ. ಮುಂದಿನ ಕಾರ್ಯಾಚರಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.ಅಧಿಕಾರಿಗಳು ಈಗಾಗಲೇ ಒಂದು ಪ್ರಾಥಮಿಕ ವರದಿಯನ್ನು ಸಿದ್ದಪಡಿಸಿದ್ದಾರೆ. ಈ ವರದಿಯನ್ನು “ಮೊಹಾಂತಿ ಪರಿಶೀಲನೆ ಮಾಡಿದ್ದಾರೆ. ಎಸ್ ಐಟಿ ಮುಖ್ಯಸ್ಥ ಮೊಹಾಂತಿ ಎರಡು ದಿನಗಳ ಮಂಗಳೂರಿನಲ್ಲೇ ಇರುವ ಕಾಲ ಸಾಧ್ಯತೆಯಿದ್ದು, ತನಿಖೆಯನ್ನು ಸ್ವತಃ ಮೇಲ್ವಿಚಾರಣೆ ಮಾಡಲಿದ್ದಾರೆ. ಸದ್ಯ ಎಲ್ಲರ ಕಣ್ಣು ಎಸ್‌ಐಟಿ ಅಧಿಕಾರಿಗಳು ಸಿದ್ದಪಡಿಸುತ್ತಿರುವ ವರದಿಯ ಮೇಲಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಶೀಘ್ರವೇ ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ನೀಡಿದ್ದರು. ಬಂದವರೆಲ್ಲ ದೂರು ಕೊಡೋದು, ಅರ್ಜಿ ಕೊಡೋದು ಆಗ್ತಿದೆ. ಅಲ್ಲದೇ, ಹೇಳಿಕೆಗಳನ್ನು ಕೊಡಲಾ ಗುತ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ಹೇಳಿದ್ದೇವೆ ಎಂದು ತಿಳಿಸಿದರು.