ಹಿರಿಯ ರಂಗ ನಟ, ನಿರ್ದೇಶಕ ರಾಜು ತಾಳಿಕೋಟೆ ನಿಧನ

Views: 87
ಕನ್ನಡ ಕರಾವಳಿ ಸುದ್ದಿ: ರಂಗ ನಟ ನಿರ್ದೇಶಕ, ಹಾಸ್ಯ ನಟ, ರಾಜು ತಾಳಿಕೋಟೆ(59) ನಿಧನರಾಗಿದ್ದಾರೆ.
ರಾಜು ತಾಳಿಕೋಟೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ಪ್ರಸಿದ್ದ ವೃತ್ತಿ ರಂಗಭೂಮಿ ಕಲಾವಿದ. ವಿಜಯಪುರ ಜಿಲ್ಲೆಯ ಸಿಂದಗಿಯವರು.ಪ್ರಸ್ತುತ ತಾಳಿಕೋಟಿ ಗ್ರಾಮದಲ್ಲಿ ಕುಟಂಬದೊಡನೆ ವಾಸವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದಾರೆ. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು ಇವರ ತಂದೆ ತಾಯಿಗಳು ಖಾಸ್ಗತೇಶ್ವರ ನಾಟ್ಯ ಸಂಘ’ ಸ್ಥಾಪಿಸಿ ರಾಜ್ಯಾದ್ಯಂತ ಪ್ರದರ್ಶನಕ್ಕೆ ಹೋಗುತ್ತಿದ್ದರಿಂದ ನಾಲ್ಕನೇ ತರಗತಿಗೆ ಶಾಲೆಗೆ ವಿದಾಯ, ತಂದೆಯ ನಂತರ ಇವರು ಮತ್ತು ಇವರ ಅಣ್ಣ ಸೇರಿ ನಾಟಕ ಕಂಪನಿ ನೆಡೆಸುತ್ತಾರೆ. ಇವರು ಮಾಡಿರದ ಕೆಲಸವಿಲ್ಲ. ರೋಡಿನಲ್ಲಿ ಚಕ್ಕಲಿ ಮಾರುವುದು, ಹೋಟೆಲ್ ಕ್ಲೀನರ್ ಆಗಿ, ಗೇಟ್ ಕೀಪರ್ ಆಗಿ ಹೀಗೆ ಹೊಟ್ಟೆಪಾಡಿಗಾಗಿ ಹತ್ತು ಹಲವಾರು ಕೆಲಸ ಮಾಡಿದ್ದಾರೆ.
ನಿರ್ದೇಶಕ ಆನಂದ್ ಪಿ ರಾಜು ರವರ `ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೂ ಬಂದರು. ನಂತರ ಕೆಲ ಪಾತ್ರಗಳಲ್ಲಿ ಮಾಡಿದ್ದರು ಹೆಸರು ಬರಲಿಲ್ಲ. ಯೋಗರಾಜ್ ಭಟ್ಟರ ಮನಸಾರೆ ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. ಮನಸಾರೆ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಖಾಸ್ಗತೇಶ್ವರ ನಾಟ್ಯ ಸಂಘ’ದ ಸಂಚಾಲಕರಾಗಿ ರಾಜ್ಯಾದಾದ್ಯಂತ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕುಡುಕರ ಜೀವನದ ಆಟೋಟೋಪಗಳನ್ನು ಹಾಸ್ಯವಾಗಿ ಚಿತ್ರಸಿದ `ಕಲಿಯುಗದ ಕುಡುಕ’ ನಾಟಕ ಮುಖಾಂತರ ತುಂಬಾ ಪ್ರಸಿದ್ಧಿ ಪಡೆದರು.