ಇತರೆ
ಸ್ನಾನಕ್ಕೆಂದು ಚೆಕ್ ಡ್ಯಾಂ ಗೆ ಇಳಿದಿದ್ದ ಅಣ್ಣ-ತಂಗಿ ನೀರಿನಲ್ಲಿ ಮುಳುಗಿ ಸಾವು

Views: 69
ಕನ್ನಡ ಕರಾವಳಿ ಸುದ್ದಿ: ಸ್ನಾನಕ್ಕೆಂದು ಚೆಕ್ ಡ್ಯಾಂ ಗೆ ಇಳಿದಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದಲ್ಲಿ ನಡೆದಿದೆ.
ಈರಣ್ಣ ಸಿದ್ದಪ್ಪ ಶಿರಸಂಗಿ (13) ಹಾಗೂ ಗುರವ್ವ ಸಿದ್ದಪ್ಪ ಶಿರಸಂಗಿ (11) ಮೃತ ದುರ್ದೈವಿಗಳು
ಹಣಮಂತ ಪಾಟೀಲ್ ಎಂಬುವವರ ಜಮೀನಿನಲ್ಲಿ ನಡೆದ ಈ ದುರಂತದಲ್ಲಿ ಈಜು ಬರದೇ ಮಕ್ಕಳಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿ ಮಕ್ಕಳ ತಂದೆ ಸಿದ್ದಪ್ಪ ಶಿರಸಂಗಿ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.