ಇತರೆ
ಮಗಳು ಪ್ರಿಯಕರನೊಂದಿಗೆ ಪರಾರಿ: ಇಡೀ ಊರಿಗೆ ಮಗಳ ತಿಥಿ ಊಟ ಹಾಕಿಸಿದ ತಂದೆ

Views: 272
ಕನ್ನಡ ಕರಾವಳಿ ಸುದ್ದಿ: ಮಗಳು ಮನೆ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋದಳೆಂದು ಮನನೊಂದ ತಂದೆ ಮಗಳ ತಿಥಿ ಮಾಡಿಸಿ ಇಡೀ ಊರಿಗೆ ಊಟ ಹಾಕಿಸಿರುವ ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಗೌಡ ಎಂಬುವವರ ಮಗಳು ಅಶ್ವಿನಿ ಅದೇ ಗ್ರಾಮದ ವಿಠಲ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇಬ್ಬರ ಮದುವೆಗೆ ಕುಟುಂಬದವರ ವಿರೋಧವಿತ್ತು. ಮಗಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರಿಯಕರನ ಜೊತೆ ಓಡಿಹೋಗಿದ್ದಕ್ಕೆ ತೀವ್ರವಾಗಿ ಕೋಪಗೊಂಡ ತಂದೆ ಶಿವಗೌಡ ಇಡೀ ಊರಿಗೆ ಮಗಳ ತಿಥಿ ಬ್ಯಾನರ್, ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿದ್ದಾರೆ.
ಅಲ್ಲದೇ ಬದುಕಿದ್ದ ಮಗಳ ತಿಥಿ ಮಾಡಿ ಊರ ಜನರಿಗೆ ತಿಥಿ ಊಟ ಹಾಕಿ ಮಗಳು ತಮ್ಮ ಪಾಲಿಗೆ ಸತ್ತು ಹೋದಳು ಎಂದು ವಿಲಕ್ಷಣತೆ ಮೆರೆದಿದ್ದಾರೆ.