ಯುವಜನ
ನಾಪತ್ತೆಯಾಗಿದ್ದ ಯುವ ಜೋಡಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದರು!
Views: 114
ಕನ್ನಡ ಕರಾವಳಿ ಸುದ್ದಿ:ಕಾಸರಗೋಡು ಇಡುಕ್ಕಿಯಿಂದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮತ್ತು ಆಕೆಯ ಪ್ರಿಯತಮನನ್ನು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾಂಞಂಗಾಡ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
16 ರ ಹರೆಯದ ಪ್ಲಸ್ ಟು ವಿದ್ಯಾರ್ಥಿನಿ ಮತ್ತು ಹಾಗು 18ರ ಹರಯದ ಯುವಕ ಪೊಲೀಸ್ ವಶವಾದರು. ಜೊತೆಗಿದ್ದ ತಮಿಳುನಾಡು ನಿವಾಸಿಯನ್ನು ತನಿಖೆಗೊಳಿಸಿ ಬಿಡಲಾಯಿತು.
ಅವರು ನಾಪತ್ತೆಯಾಗಿರುವ ಬಗ್ಗೆ ಕೇಸು ದಾಖಲಾಗಿದ್ದು, ಸೈಬರ್ ಸೆಲ್ ನೆರವಿನೊಂದಿಗೆ ತನಿಖೆ ನಡೆಸಿದರೂ ಮಾಹಿತಿ ಲಭಿಸಿರಲಿಲ್ಲ ಇದೇ ವೇಳೆ ಈ ಇಬ್ಬರು ಮತ್ತು ಇನ್ನೋರ್ವನನ್ನು ಟಿಕೆಟ್ ಇಲ್ಲವೆಂಬ ಕಾರಣಕ್ಕೆ ರೈಲಿನ ಪರಿವೀಕ್ಷಕರು ಕಾಂಞಂಗಾಡ್ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಿಸಿದಾಗ ಇಡುಕ್ಕಿಯಿಂದ ನಾಪತ್ತೆಯಾದವರು ಎಂದು ತಿಳಿದುಬಂದಿದೆ.