ಯುವಜನ

ನಡುರಸ್ತೆಯಲ್ಲಿ ಬೈಕ್‌ನಲ್ಲಿ ಸ್ಟಂಟ್ ಮಾಡಿದ ದಂಪತಿ; ಕೊನೆಗೆ ಆಗಿದ್ದೇನು?

Views: 466

ಕನ್ನಡ ಕರಾವಳಿ ಸುದ್ದಿ: ಚಲಿಸುವ ಬೈಕಿನಲ್ಲಿ ಗಂಡ ಮತ್ತು ಹೆಂಡತಿ ಸ್ಟಂಟ್ ಮಾಡಿದ ವಿಡಿಯೊವೊಂದು ವೈರಲ್‌ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯ ಬಗ್ಗೆ ನಗರ ಪೊಲೀಸರಿಗೆ ವರದಿ ಮಾಡಲಾಗಿದ್ದು, ದಂಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಹಾಗಾಗಿ ನೋಯ್ಡಾ ಸಂಚಾರ ಪೊಲೀಸರು ದಂಪತಿಗೆ ಭಾರಿ ದಂಡ ವಿಧಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಜನನಿಬಿಡ ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್‌ನಲ್ಲಿ ಸ್ಟಂಟ್‌ ಮಾಡುತ್ತಿರುವುದು ಸೆರೆಯಾಗಿದೆ. ಪತ್ನಿ ಇಂಧನ ಟ್ಯಾಂಕ್‌ನಲ್ಲಿ ಕುಳಿತು ತನ್ನ ಕಾಲುಗಳನ್ನು ಅವನ ಸುತ್ತಲೂ ಸುತ್ತಿಕೊಂಡಿದ್ದಾಳೆ. ಇಬ್ಬರು ಹೆಲ್ಮೆಟ್ ಕೂಡ ಧರಿಸಿಲ್ಲ.

ಎಕ್ಸ್‌ಪ್ರೆಸ್‌ವೇಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಕೃತ್ಯ ರೆಕಾರ್ಡ್ ಆಗಿದೆ. ದಾರಿ ಹೋಕರೊಬ್ಬರು ಈ ದೃಶ್ಯವನ್ನು ವಿಡಿಯೊ ಮಾಡಿ ಸಂಚಾರ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಹಾಗಾಗಿ ನೋಯ್ಡಾ ಸಂಚಾರ ಪೊಲೀಸರು, ಮೋಟಾರು ವಾಹನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ 53,500 ರೂ.ಗಳ ಭಾರಿ ದಂಡ ವಿಧಿಸಿದ್ದಾರೆ.

 

Related Articles

Back to top button
error: Content is protected !!