ಇತರೆ

ಧರ್ಮಸ್ಥಳ “ಬುರುಡೆ” ಪ್ರಕರಣ: ಎಸ್‌ಐಟಿ ತನಿಖೆಯಲ್ಲಿ ಮಾಹಿತಿ ಸಿಗದಿದ್ದರೆ ಅನಾಮಿಕನ ವಿರುದ್ದ ಕ್ರಮ?

Views: 119

ಕನ್ನಡ ಕರಾವಳಿ ಸುದ್ದಿ: ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಅನಾಮಧೇಯ ವ್ಯಕ್ತಿಯ ‘ಬುರುಡೆ’ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವ ಅನುಮಾನಗಳಿಗೆ ಪುಷ್ಟಿ ಸಿಗುತ್ತಿದ್ದಂತೆ, ಇದೀಗ ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕೆ? ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ಆರಂಭಗೊಂಡಿವೆ.

ವಿಧಾನಸಭೆಯಲ್ಲಿ ನಡೆದ ಚರ್ಚೆ ಯಲ್ಲಿ ಬಿಜೆಪಿ ನಾಯಕರು, ಅನಾಮಿಕ ವ್ಯಕ್ತಿಯ ಬಗ್ಗೆ ಮೊದಲು ತನಿಖೆ ನಡೆಸಬೇಕು ಹಾಗೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದ ಆರೋಪದಲ್ಲಿ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದರು.

ಇದೀಗ ಗೃಹ ಇಲಾಖೆಯೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಮುಂದಿನ ಕೆಲ ದಿನಗಳ ಕಾಲ ನಡೆಯುವ ಪ್ರಕ್ರಿಯೆಯನ್ನು ಗಮನಿಸಿ ಕ್ರಮವಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅನಾಮಿಕ ವ್ಯಕ್ತಿ ಹೇಳಿರುವ ಕಡೆಯಲ್ಲ ಎಸ್‌ಐಟಿ ಅಧಿಕಾರಿಗಳು ಗುಂಡಿ ತೋಡಿದ್ದಾರೆ. ಆದರೆ ಯಾವ ಜಾಗದಲ್ಲಿಯೂ ಬರುಡೆ ಸಿಕ್ಕಿಲ್ಲ. ಒಂದು ಸ್ಥಳದಲ್ಲಿ ಮೂಳೆ ಸಿಕ್ಕರೂ ಅದಕ್ಕೂ ಅನಾಮಿಕ ವ್ಯಕ್ತಿ ಮಾಡುತ್ತಿರುವ ಆರೋಪಕ್ಕೂ ಹೋಲಿಕೆಯಾಗುತ್ತಿಲ್ಲ. ಆದ್ದರಿಂದ ಸುಳ್ಳು ಮಾಹಿತಿಯ ಮೂಲಕ ಇಡೀ ತನಿಖೆಯ ದಿಕ್ಕನ್ನು ತಪ್ಪಿಸಿದ ಹಾಗೂ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ದೂರು ದಾಖಲಿಸುವ ಸಾಧ್ಯತೆಯಿದೆ. ಆದರೆ ಇದಕ್ಕೂ ಮೊದಲು ಆತ ತೋರಿಸಿರುವ ಇನ್ನಷ್ಟು ಜಾಗದಲ್ಲಿ ಗುಂಡಿ ತೋಡಿ, ಸುಳ್ಳು ಎನ್ನುವುದು ಸಾಬೀತಾದ ಬಳಿಕ ಮುಂದುವರಿಯಲು ತೀರ್ಮಾನಿಸಿದ್ದಾರೆ ಎನ್ನಲಾಠಗಿದೆ.

ಮಟ್ಟೆಣ್ಣವರ ವಿರುದ್ದ ದೂರು

ಧರ್ಮಸ್ಥಳದ ವಿರುದ್ಧ ಸುಖಾ ಸುಮ್ಮನೆ ಸೋಶಿಯಲ್ ಮೀಡಿಯಾಗಳಲ್ಲಿ ಆವಹೇಳೆನ ಮಾಡುತ್ತಿರುವ ಗಿರೀಶ್ ಮಟ್ಟೆಣ್ಣವರ ಹಾಗೂ ರಾಮ್‌ಪೇಜ್ ಮಾಲೀಕನ ಮೇಲೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಜಕ್ಕಣವರ್ ಎಂಬುವವರು ದೂರು ದಾಖಲಿಸಿದ್ದಾರೆ.

Related Articles

Back to top button