ಸಾಮಾಜಿಕ

ದ‌‌.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ವಿದ್ಯಾವರ್ಧಕ ಸಂಘ: ರಾಷ್ಟ್ರೀಯ ಕೈಮಗ್ಗ ದಿನಾಚರಣೆ

Views: 274

ಮಂಗಳೂರು:ಹಳೆಯಂಗಡಿ ಕಲ್ಲಾಪು ಶ್ರೀವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಶ್ರೀವೀರಭದ್ರ ಸಭಾಭವನದಲ್ಲಿ ದ‌‌.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ವಿದ್ಯಾವರ್ಧಕ ಸಂಘದ ವತಿಯಿಂದ, 3ನೇ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಸಹಕಾರದಲ್ಲಿ, ಹಳೆಯಂಗಡಿ ಕಲ್ಲಾಪು ದೇವಸ್ಥಾನದ ಸಹಯೋಗ ಮತ್ತು ಅತಿಥ್ಯದಲ್ಲಿ “ರಾಷ್ಟ್ರೀಯ ಕೈಮಗ್ಗ ದಿನಾಚರಣೆ”ಯನ್ನು ಬಹಳ ವಿಜೃಂಭಣೆಯಿಂದ ನಿರೀಕ್ಷೆಗೂ ಮೀರಿ ಸರ್ವರ ಸಹಕಾರದಿಂದ ಸಂಪನ್ನಗೊಂಡಿದೆ.

ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ಹಳೆಯಂಗಡಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಗುರಿಕಾರರು,ಪ್ರತಿನಿಧಿಗಳಿಗೆ , ಹಳೆಯಂಗಡಿ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳಿಗೆ,ಸದಸ್ಯರಿಗೆ ಮತ್ತು ಸಮಸ್ತ ಕೂಡುಕಟ್ಟಿನ ಸಮಾಜ ಬಾಂಧವರಿಗೆ 16 ಶ್ರೀ ವೀರಭದ್ರ ದೇವಸ್ಥಾನಗಳ ಆಡಳಿತ ಮಂಡಳಿಯ ಪರವಾಗಿ ಆಗಮಿಸಿದ ಆಡಳಿತ ಮೊಕ್ತೇಸರರಿಗೆ ಮತ್ತು ಪ್ರತಿನಿಧಿಗಳಿಗೆ, ನೇಕಾರರ ಸೊಸೈಟಿಯ ಅಧ್ಯಕ್ಷರು, ಆಡಳಿತ ನಿರ್ದೇಶಕರು, ಆಡಳಿತ ಮಂಡಳಿಯ ಸರ್ವ ಸದಸ್ಯರಿಗೆ, ಸಂಮಾನ ಸ್ವೀಕರಿಸಿದ ವಿಶ್ರಾಂತ ಕೈಮಗ್ಗ ನೆಯ್ಗೆಯ ಹೆಮ್ಮೆಯ ನೇಕಾರರಿಗೆ, ಸಮಸ್ತ ನೇಕಾರ ಬಂಧುಗಳಿಗೆ  ಕರೆಗೆ ಓಗೊಟ್ಟುಆಗಮಿಸಿ ಸಭಾಕಾರ್ಯಕ್ರಮಕ್ಕೆ ಮರುಗು ನೀಡಿದ ಉದ್ಘಾಟಕರಿಗೆ  ಶುಭಾಶಂಸನೆ ಗೈದ ಗೌರವಾನ್ವಿತ ಸಾವಂತರಿಗೆ,ಜವುಳಿ ಮತ್ತು ಕೈಮಗ್ಗ ಇಲಾಖೆಯ ಮಾನ್ಯ ಸಹಾಯಕ ನಿರ್ದೇಶಕರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗೌರವಾನ್ವಿತ ಅತಿಥಿ ಅಭ್ಯಾಗತರಿಗೆ,ತನು ಮನ ಧನದ ಮೂಲಕ ಸಹಕರಿಸಿದ ಗಣ್ಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಮಸ್ತ ಸಮಾಜ ಬಾಂಧವರಿಗೆ ಉಭಯಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

 

 

 

Related Articles

Back to top button
error: Content is protected !!