ಧಾರ್ಮಿಕ
ದೇಗುಲದ ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ತುಂಡಾಗಿ ಬಿದ್ದು ವ್ಯಕ್ತಿ ಸಾವು

Views: 178
ಕನ್ನಡ ಕರಾವಳಿ ಸುದ್ದಿ: ದೇವಾಲಯದ ಕಳಸಾರೋಹಣದ ಸಂದರ್ಭದಲ್ಲಿ ಕ್ರೇನ್ ಬಕೆಟ್ ತುಂಡಾಗಿ ಬಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಕ್ರೇನ್ ಬಕೆಟ್ ಮೇಲಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿಯನ್ನು 42 ವರ್ಷದ ಮಂಜು ಪಾಟೀಲ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜು ಬಡಿಗೇರ್ ಎಂಬವರು ಗಂಭೀರ ಗಾಯಗೊಂಡಿದ್ದು, ಹಾನಗಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶೇಷಗಿರಿ ಗ್ರಾಮದಲ್ಲಿ ನಡೆಯುತ್ತಿದ್ದ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಕಳಸ ಹಿಡಿದು ಕ್ರೇನ್ ಮೂಲಕ ದೇವಸ್ಥಾನದ ಗೋಪುರದ ಹತ್ತಿರ ಹೋಗುತ್ತಿದ್ದಂತೆ ಬಕೆಟ್ ಕಳಚಿ ಬಿದ್ದು ಘಟನೆ ನಡೆದಿದೆ.
ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.