ಧಾರ್ಮಿಕ

ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕಾಂತಾರ ಪಂಜುರ್ಲಿ ಗಣೇಶೋತ್ಸವದಲ್ಲಿ ಬಾರೀ ವೈರಲ್ 

Views: 0

ಕಾಂತಾರ: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿ ಜಗತ್ತಿನಲ್ಲಿ ಸೃಷ್ಟಿಸಿದ ಹವಾ  ಗಣೇಶೋತ್ಸವದಲ್ಲಿಯೂ ರಾರಾಜಿಸುತ್ತಿದೆ.

ಕಾಂತಾರದ ಪಂಜುರ್ಲಿ ದೈವದ ನೃತ್ಯವಂತೂ ಯಾರೇ ಪ್ರದರ್ಶಿಸಿದರು ಅದು ವೈರಲ್ ಆಗೇ ಆಗುತ್ತದೆ.

ಹೀಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ತಲಾಂದ್ ಗ್ರಾಮದ ಯುವಕನೋರ್ವ ಕರಾವಳಿ ಯ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕಾಂತಾರ  ಪಂಜುರ್ಲಿ ನೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದೆ.

ಗಣೇಶೋತ್ಸವದ ವೇದಿಕೆಯಲ್ಲೂ ಕಾಂತಾರದ ಪಂಜುರ್ಲಿ ವೇಷಧಾರಿಯೊಬ್ಬ ಮಾಡಿದ ಪ್ರದರ್ಶನ ಭಾರೀ ವೈರಲ್ ಆಗಿದೆ.

ಹೀಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ತಲಾಂದ್ ಗ್ರಾಮದ ಯುವಕನೋರ್ವ ಪ್ರದರ್ಶಿಸಿದ ಪಂಜುರ್ಲಿ ನೃತ್ಯ  ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದೆ.

ಕಾಂತಾರದ ಪಂಜುರ್ಲಿ ವೇಷವನ್ನು ಧರಿಸಿ ಆತ ತೋರಿದ ಪ್ರದರ್ಶನ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

ತಲಾಂದ್ ಯುವಕ ನಿತಿನ್ ನಾಯ್ಕ ಎಂಬ ಹುಡುಗನೇ ಪಂಜುರ್ಲಿ ವೇಷಧಾರಿಯಾಗಿ ಗಮನಸೆಳೆದಿದ್ದಾನೆ. ಈತನ ವೇಷಭೂಷಣವು ಜನರ ಮೆಚ್ಚುಗೆಗೂ ಪಾತ್ರವಾಯಿತು.

ಈತನ ವೇಷಭೂಷಣವು ಜನರ ಮೆಚ್ಚುಗೆಗೂ ಪಾತ್ರವಾಯಿತು. ಕಾಂತಾರ ಸಿನೆಮಾದಲ್ಲಿ ಪಂಜುರ್ಲಿ ದೈವವು ಕಣ್ಮರೆ ಆಗುವ ದೃಶ್ಯವನ್ನು ಮರುಸೃಷ್ಟಿಸಿದಂತಿತ್ತು‌

ವೇದಿಕೆಯಿಂದ ನೇರವಾಗಿ ಜನರ ಮಧ್ಯೆಯಿಂದ ದೂರ ಹೋಗಿ ಸುತ್ತಲೂ ಹಾಕಿದ ಬೆಂಕಿಯ ನಡುವೆ ನಿಂತು ಪಂಜುರ್ಲಿ ವೇಷಧಾರಿ ಅಬ್ಬರಿಸುತ್ತಾನೆ.

ಕಾಂತಾರ ಸಿನೆಮಾದಲ್ಲೂ ಇಂತಹದ್ದೇ ದೃಶ್ಯ ಕಂಡಿದ್ದ ಸಿನಿಪ್ರಿಯರು ಸಾರ್ವಜನಿಕ ಗಣೇಶೋತ್ಸವದಲ್ಲೂ ಕಾಣುವಂತಾಗಿದ್ದು ಖುಷಿಪಟ್ಟರು. ಪಂಜುರ್ಲಿ ದೈವದಂತೆಯೇ ಅಬ್ಬರಿಸುವ ಮೂಲಕ ನಿತಿನ್‌ ನಾಯ್ಕ ಕೂಡಾ ಭಾರೀ ಗಮನಸೆಳೆದರು.

Related Articles

Back to top button
error: Content is protected !!