ಧಾರ್ಮಿಕ
ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಗಾಯ

Views: 0
ಉಡುಪಿ: ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಗಾಯವಾಗಿರುವ ಘಟನೆ ನಡೆದಿದೆ. ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ಪೇಜಾವರ ಮಠದಲ್ಲಿ ಭಕ್ತರು ಸ್ವಾಮೀಜಿಗೆ ತುಲಾಭಾರ ನಡೆಸುತ್ತಿದ್ದಾಗ ಹಗ್ಗ ತುಂಡಾಗಿ ತಕ್ಕಡಿ ಬಿದ್ದಿದೆ. ಆದರೆ, ಶ್ರೀಗಳಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೆಹಲಿ ಪ್ರವಾಸ ಮುಗಿಸಿ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಪ್ರಸನ್ನಾಭಿನಂದನಂ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.
ಶ್ರೀಗಳು ಪ್ರತಿಕ್ರಿಯಿಸಿ, ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಕಳಚಿ ಬಿದ್ದಿದೆ. ದೊಡ್ಡ ಗಾಯ ಏನೂ ಆಗಿಲ್ಲ, ನಾನು ಆರಾಮವಾಗಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.






