ಇತರೆ

ತುಪ್ಪಕ್ಕಾಗಿ ಅತ್ತೆ ಸೊಸೆ ಜಗಳ:ಕೋಪಗೊಂಡ ಸೊಸೆ ವಿಷ ಸೇವಿಸಿ ಆತ್ಮಹತ್ಯೆ

Views: 59

ಕನ್ನಡ ಕರಾವಳಿ ಸುದ್ದಿ:  ಮಹಿಳೆಯೊಬ್ಬರು ತುಪ್ಪದ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳವಾಡಿದ್ದು, ಬಳಿಕ ಪತಿ ಅವರ ತಾಯಿಗೆ ಸ್ವಲ್ಪ ಹೆಚ್ಚು ತುಪ್ಪ ನೀಡಿದ್ದಕ್ಕೆ ಕೋಪಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವರದಿಯಾಗಿದೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಇಮ್ಲೌಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೋನಮ್ ಜಾತವ್ ಮೃತ ಸೊಸೆ. ತಮ್ಮ ಇಚ್ಚೆಗೆ ವಿರುದ್ಧ ಪತಿ ತಾಯಿ ಹೆಚ್ಚು ತುಪ್ಪ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪತಿ ಧನಪಾಲ್ ದೂರಿನ ಪ್ರಕಾರ, 2017ರಲ್ಲಿ ಸೋನಮ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಅವಿಭಕ್ತ ಕುಟುಂಬದಲ್ಲಿನ ಸಮಸ್ಯೆಗಳಿಂದಾಗಿ ಸೋನಮ್ ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದರು. ಗುರುವಾರ ಬೆಳಿಗ್ಗೆ ಧನಪಾಲ್ ಅವರ ತಾಯಿ ಸೋನಮ್ ಅವರನ್ನು ಸ್ವಲ್ಪ ತುಪ್ಪ ಕೇಳಿದ್ದಾರೆ. ಆದರೆ ಆರಂಭದಲ್ಲಿ ಸೋನಮ್ ತುಪ್ಪ ಕೊಡಲು ನಿರಾಕರಿಸಿದ್ದಾರೆ. ಆದರೆ ಪತಿಯ ಒತ್ತಾಯದ ಮೇರೆಗೆ 100 ಗ್ರಾಂ ತುಪ್ಪವನ್ನು ನೀಡಿದ್ದಾರೆ. ಬಳಿಕ ಪತಿ ಮತ್ತಷ್ಟು ಹೆಚ್ಚುವರಿಯಾಗಿ ತಾಯಿ ತುಪ್ಪ ನೀಡಿದ್ದಾರೆ.

ತನ್ನ ಇಚ್ಚೆಗೆ ವಿರುದ್ಧ ಪತಿ ಹೆಚ್ಚು ತುಪ್ಪ ನೀಡಿದ್ದರಿಂದ ಕೋಪಗೊಂಡ ಸೋನಮ್ ಪತಿ ಜೊತೆ ಜಗಳವಾಡಿ ಬಳಿಕ ಮನೆಯಲ್ಲಿದ್ದ ವಿಷವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಪತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ರೂ, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಇಂದರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Related Articles

Back to top button
error: Content is protected !!