ಧಾರ್ಮಿಕ

ತಿರುಪತಿ ದೇವಸ್ಥಾನದಲ್ಲಿ ಭಾರೀ ಕಾಲ್ತುಳಿತ; 7 ಮಂದಿ ಭಕ್ತರು ಸಾವು,150 ಮಂದಿಗೆ ಗಾಯ

Views: 126

ಕನ್ನಡ ಕರಾವಳಿ ಸುದ್ದಿ: ತಿರುಪತಿ ತಿರುಮಲ ದೇವಾಲಯದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಏಳು ಭಕ್ತರು ಸಾವನ್ನಪ್ಪಿದ್ದು, 150 ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಏರುತ್ತಲೇ ಇದೆ.

ದೇವಾಲಯದ ವಿಷ್ಣು ನಿವಾಸಂನಲ್ಲಿ ವಿಶೇಷ ದರ್ಶನದ ಟಿಕೆಟ್ ನೀಡುವ ಈ ವೇಳೆ ಅವಘಡ ಸಂಭವಿಸಿದೆ.

ವೈಕುಂಠ ಏಕಾದಶಿಯ ಪ್ರಯುಕ್ತ ಜನವರಿ 10 ರಿಂದ 12 ರವರೆಗೆ ನಡೆಯಲಿದ್ದ ವಿಶೇಷ ಪೂಜೆಯ ದರ್ಶನಕ್ಕಾಗಿ ಟಿಕೆಟ್ ನೀಡಲೆಂದು ಟಿಟಿಡಿಯು 9 ಕೇಂದ್ರಗಳಲ್ಲಿ 94 ಕೌಂಟರ್ ಗಳನ್ನು ತೆರೆದಿದ್ದು, ಈ ಪೈಕಿ ವಿಷ್ಣು ನಿವಾಸಂ ಕೌಂಟರ್ ನಲ್ಲಿ ಜನರು ಸಾಲುಮಟ್ಟಿ ನಿಂತಿದ್ದರು. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಭಕ್ತರ ಏಕಾಏಕಿ ನುಗ್ಗಿದ್ದರಿಂದ ಈ ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ದುರಂತದ ಬೆನ್ನಲ್ಲೇ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ವಿತರಣೆಯನ್ನು ರದ್ದು ಮಾಡಲಾಗಿದೆ.

 

 

 

Related Articles

Back to top button
error: Content is protected !!