ತವರಿಗೆ ಹೋಗ್ತೀನಿ ಎಂದ ಹೆಂಡತಿ ಮಾತಿಗೆ ಸಿಟ್ಟಿಗೆದ್ದ ಗಂಡ ಮೂಗು ಕತ್ತರಿಸಿಯೇ ಬಿಟ್ಟ!

Views: 139
ಲಕ್ನೋ: ಉತ್ತರಪ್ರದೇಶದಲ್ಲಿ ಪಾಪಿ ಗಂಡನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಕ್ಕೆ ಹೆಂಡತಿಯ ಮೂಗು ಕತ್ತರಿಸಿದ ಘಟನೆ ನಡೆದಿದೆ.
ಉತ್ತರಪ್ರದೇಶದ ಹಾರ್ಡೋಯಿ ಜಿಲ್ಲೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬರು ನಾಳೆ ರಕ್ಷಾಬಂಧನ ಹಬ್ಬ ಇದೆ. ನಾನು ನನ್ನ ತವರು ಮನೆಗೆ ಹೋಗಿ ನನ್ನ ಅಣ್ಣಂದಿರಿಗೆ ರಾಖಿ ಕಟ್ಟಿ ಬರುತ್ತೇನೆ ಎಂದು ಕೇಳಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಗಂಡ ಹೆಂಡತಿಯ ಮೂಗು ಕತ್ತರಿಸಿದ್ದಾನೆ.
ಗಂಡನಿಂದ ಮೂಗು ಕತ್ತಿರಿಸಿಕೊಂಡ ಮಹಿಳೆಯನ್ನು ಅಕ್ಕ-ಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ.ತೀವ್ರ ರಕ್ತಸ್ರಾವದಿಂದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ.
ಈ ಘಟನೆಯ ವಿಚಾರಣೆ ನಡೆಸಿದಾಗ ಹೆಂಡತಿಯ ಮೂಗು ಕತ್ತರಿಸಿದ ಗಂಡನನ್ನು ರಾಹುಲ್ ಎಂದು ಗುರುತಿಸಲಾಗಿದೆ. ರಾಹುಲ್ ಬನಿಯಾನಿ ಪುರ್ವಾದ ನಿವಾಸಿ. ರಾಹುಲ್ ಪತ್ನಿ ಅನಿತಾ ಗಾಯಗೊಂಡ ಮಹಿಳೆಯಾಗಿದ್ದಾರೆ. ಸದ್ಯ 25 ವರ್ಷದ ಅನಿತಾ ಸ್ಥಿತಿ ಗಂಭೀರವಾಗಿದ್ದು, ಹಾರ್ಡೋಯಿ ಆಸ್ಪತ್ರೆಯಿಂದ ಲಕ್ನೋ ಟ್ರಾಮಾ ಸೆಂಟರ್‌ಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.






