ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಪ್ರಿಯಕರ !!

Views: 209
ಮೂಡಬಿದಿರೆಯ ಹೆಸರಾಂತ ಕಾಲೇಜಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಘಟನೆ ಸೋಮವಾರ ನಡೆದಿದೆ.ಆರೋಪಿ ಬಂಧಿಸಲಾಗಿದ್ದು, ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ಮೂಲದ ವಿದ್ಯಾರ್ಥಿ ಮಂಜುನಾಥ್ ನಿಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ನಡುವೆ ಪ್ರೇಮಾಂಕುರವಾಗಿತ್ತು.ವಿದ್ಯಾರ್ಥಿನಿ ಕೂಡ ತುಮಕೂರು ಮೂಲದವಳಾಗಿದ್ದು ಪಿಯುಸಿವರೆಗೆ ಇವರಿಬ್ಬರು ಜೊತೆಯಾಗಿಯೇ ಆಳ್ವಾಸ್ ನಲ್ಲಿ ಕಲಿಯುತ್ತಿದ್ದರು. ಹುಡುಗ ಆ ನಂತರ ಕಾಲೇಜು ಬಿಟ್ಟಿದ್ದು, ಈಕೆ ವಿದ್ಯಾಬ್ಯಾಸ ಮುಂದುವರಿಸಿದ್ದಳು. ಇವರ ನಡುವಿನ ಪ್ರೇಮದ ವಿಚಾರ ಹುಡುಗಿ ಮನೆಯವರಿಗೆ ತಿಳಿದಿದ್ದು ಆಕೆಯ ಬಳಿಯಿದ್ದ ಮೊಬೈಲ್ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.
ತನ್ನ ಪ್ರೀತಿ ಪ್ರೇಮ ಅರ್ಧದಲ್ಲೇ ಮೊಟಕುಗೊಂಡ ಹಿನ್ನೆಲೆಯಲ್ಲಿ ಪ್ರಿಯಕರ ಮಂಜುನಾಥ್ ವಿದ್ಯಾರ್ಥಿನಿ ವಿರುದ್ಧ ಸೇಡಿನ ಮನೋಭಾವ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ತನ್ನ ಪ್ರೇಯಸಿಯ ಭೇಟಿಗಾಗಿ ತುಮಕೂರಿನಿಂದ ನೇರ ಮೂಡಬಿದಿರೆಗೆ ಬಂದಿದ್ದ ಈತನ ಭೇಟಿಗೆ ನಿರಾಕರಿಸಿದ ವಿದ್ಯಾರ್ಥಿನಿ ನಡೆಯಿಂದ ಕುಪಿತಗೊಂಡ ಮಂಜುನಾಥ್ ನೇರವಾಗಿ ತರಗತಿಗೆ ನುಗ್ಗಿ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ಮೂಡಬಿದಿರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ






