ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 28ರಂದು ವಕ್ವಾಡಿ ಮಾಗಣೆ (ಕಾಳಾವರ, ಹೂವಿನಕೆರೆ, ಅಸೋಡು, ಕೆಳಾರ್ಕಳಬೆಟ್ಟು, ಉಡುಪಿ- ನಾಯರ್ ಕೆರೆ, ಕುಂಭಾಶಿ, ಗೋಪಾಡಿ, ನೂಜಿ, ಕೋಟೇಶ್ವರ, ಯಡಾಡಿ -ಮತ್ಯಾಡಿ) ಇವರ ಸಾರರ್ಥ್ಯದಲ್ಲಿ ಊರಿನ ಸಮಸ್ತ ಭಕ್ತರ ಆರೋಗ್ಯ, ಸಮೃದ್ಧಿ, ಸಮಗ್ರ ಯಶಸ್ವಿಗಾಗಿ ವೇದಮೂರ್ತಿ ಶ್ರೀ ಎನ್ ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ “ಸಾಮೂಹಿಕ ಚಂಡಿಕಾ ಹೋಮ” ಸತ್ಯನಾರಾಯಣ ಪೂಜೆ, ಏಕಾದಶ ರುದ್ರಾಭಿಷೇಕ, ಮೂಡು ಗಣಪತಿ ಸೇವೆ, ನಾಗದೇವರಿಗೆ ತನು, ಹಾಲು ಪಾಯಸ ಸೇವೆ, ತೈಲ ಭಕ್ಷ್ಯ, ಕಡಬು, ಮೋದಕ ಸೇವೆ, ಪರಿವಾರ ದೇವರಿಗೆ ವಿಶೇಷ ಪೂಜೆಯನ್ನು ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ,ವೀರೇಶ್ವರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಸಂಘಟನಾ ಸಮಿತಿ, ಯುವ ಸಮಿತಿ, ಮಹಿಳಾ ವೇದಿಕೆ, ಟ್ರಸ್ಟ್, ಸಹ ಮೊಕ್ತೇಸರರು, ಮಾಗಣೆ ಗುರಿಕಾರರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ದೇಗುಲದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ