ಕೃಷಿ

ಟ್ರ್ಯಾಕ್ಟ‌ರ್ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು 7 ಮಹಿಳಾ ಕಾರ್ಮಿಕರು ಸಾವು

Views: 74

ಕನ್ನಡ ಕರಾವಳಿ ಸುದ್ದಿ: ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟ‌ರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಪರಿಣಾಮ 7 ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ತಾರಾಬಾಯಿ ಸತ್ವಾಜಿ ಜಾಧವ್ (35) ಸರಸ್ವತಿ ಲಖನ್ ಬುರಾದ್ (25), ಧ್ರುಪತ ಸತ್ವಾಜಿ ಜಾಧವ್ (18), ಸಿಮ್ರಾನ್ ಸಂತೋಷ ಕಾಂಬಳೆ (18), ಚೈತ್ರಾಬಾಯಿ ಮಾಧವ್ ಪರ್ಧೆ (45), ಜ್ಯೋತಿ ಇರಬಾಜಿ ಸರೋದೆ (35), ಸಪ್ನಾ ತುಕಾರಾಂ ರಾವುತ್ (25) ಎಂದು ಗುರುತಿಸಲಾಗಿದೆ.

ಅಲೆಗಾಂವ್‌ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟ್ರ್ಯಾಕ್ಟರ್‌ನಲ್ಲಿ ಕನಿಷ್ಠ 10 ಮಂದಿ ಪ್ರಯಾಣಿಸುತ್ತಿದ್ದು, ಹೊಲದಲ್ಲಿ ಅರಿಶಿನ ಕೊಯ್ಯಲು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ.

ಬಾವಿಯಲ್ಲಿ ನೀರು ಜಾಸ್ತಿ ಇದ್ದ ಕಾರಣ ಟ್ರ್ಯಾಕ್ಟ‌ರ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಪರಿಣಾಮ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನನ್ನು ಸ್ಥಳೀಯರು ರಕ್ಷಿಸಿದ್ದಾರೆ.

Related Articles

Back to top button
error: Content is protected !!