ಸಾಮಾಜಿಕ

ಟೈಲರಿಂಗ್ ಸ್ವಾವಲಂಬಿ ಬದುಕಿಗೆ ಕೋಟೇಶ್ವರ ಶ್ರೀಮತಿ ಪ್ರೇಮ ಶೆಟ್ಟಿಗಾರ್ ಮಾದರಿ

Views: 24

ಕೋಟೇಶ್ವರ:ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಕೋಟೇಶ್ವರದ ಶ್ರೀಮತಿ ಪ್ರೇಮ ಶೆಟ್ಟಿಗಾರ್ ಅವರು ವಿವಿಧ ಯೋಜನೆಯಡಿ ಸಾಲ ಸೌಲಭ್ಯದ ಜೊತೆಗೆ 2006 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಸಹಾಯ ಸಂಘದಿಂದ 15,000 ರೂಪಾಯಿ ಮೂಲ ಬಂಡವಾಳದೊಂದಿಗೆ ಟೈಲರಿಂಗ್ ತರಬೇತಿ ಆರಂಭಿಸಿದ ಶ್ರೀಮತಿ ಪ್ರೇಮ ಶೆಟ್ಟಿಗಾರ್ ಅವರು ಜನನಿ ಹೊಲಿಗೆ ತರಬೇತಿ ಕೇಂದ್ರವನ್ನು ಆರಂಭಿಸಿ, ಎಂಬ್ರಾಯ್ಡರಿ,ನೆಟ್ಟಿಂಗ್, ಟೈಲರಿಂಗ್ ತರಬೇತಿ ಮತ್ತು ಸರಕಾರದ ವಿವಿಧ ಸೌಲಭ್ಯದೊಂದಿಗೆ ಉಚಿತ ತರಬೇತಿ ನೀಡುತ್ತಾ ಬಂದಿದ್ದಾರೆ..

ಚಂದಾನಂದ ಶೆಟ್ಟಿಗಾರ್ ಹಾಗೂ ಕಮಲ ಶೆಟ್ಟಿಗಾರ್ ಅವರ ಪುತ್ರಿ ಪ್ರೇಮ ಶೆಟ್ಟಿಗಾರರು ಮೆಟ್ರಿಕ್ ಪರೀಕ್ಷೆಯೊಂದಿಗೆ ಕನ್ನಡ, ಇಂಗ್ಲೀಷ್ ಟೈಪ್ ರೈಟಿಂಗ್ ಕಲಿತು, ಬೆಂಗಳೂರಿನಲ್ಲಿ ಟೈಲರಿಂಗ್ ತರಬೇತಿ ಮುಗಿಸಿ ಕೋಟೇಶ್ವರ ಪಶು ವೈದ್ಯಕೀಯ ಇಲಾಖೆಯ ಶ್ರೀ ಮಂಜುನಾಥ್ ಶೆಟ್ಟಿಗಾರ್ ಇವರ ಪತಿ, ಇವರಿಗೆ ಇಬ್ಬರು ಪುತ್ರರಿದ್ದಾರೆ.

ಇವರು ಕೋಟೇಶ್ವರ ಗ್ರಾಮ ಪಂಚಾಯತ್ ಎದುರು ತಮ್ಮ ಸ್ವಂತ ಜಾಗದಲ್ಲಿ 2006ರಲ್ಲಿ ಜನನಿ ಹೊಲಿಗೆ ತರಬೇತಿ ಕೇಂದ್ರ( ರಿ) ಆರಂಭಿಸಿದರು. ಈ ಸಂಸ್ಥೆಯಲ್ಲಿ ಸಾವಿರಾರು ಮಂದಿಗೆ ಹೊಲಿಗೆ ತರಬೇತಿ ನೀಡಿ ಅವರ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಕರಾಗಿದ್ದರು.

ಈ ಸಂಸ್ಥೆಯಲ್ಲಿ ಸಣ್ಣ ಕೈಗಾರಿಕೆ ವತಿಯಿಂದ 15 ಮಂದಿಗೆ ವಿದ್ಯಾರ್ಥಿವೇತನ ಹಾಗೂ ಹೊಲಿಗೆ ಯಂತ್ರವನ್ನು ನೀಡಿರುತ್ತಾರೆ.ಅಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ತರಬೇತಿ ಮತ್ತು ವೈದ್ಯಕೀಯ ಸಹಕಾರ, ವಿದ್ಯಾರ್ಥಿ ವೇತನ ಪುರಸ್ಕಾರ, ಮರಣೋತ್ತರ ಮೋಕ್ಷ ವಿಧಿಗಳಿಗೆ ಸಹಾಯಹಸ್ತ ನೀಡಿ ಸೈ ಎನಿಸಿಕೊಂಡಿದ್ದಾರೆ.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಇವರ ಮನೆಯಲ್ಲಿಯೇ ಆಗಾಗ ಹೊಲಿಗೆ ತರಬೇತಿ ಶಿಬಿರ, ಸ್ವ ಉದ್ಯೋಗದ ತರಬೇತಿ ನೀಡುತ್ತಿದ್ದಾರೆ.

ಸಕ್ರೀಯ ಸಮಾಜಸೇವಕರಾದ ಇವರು ಟೈಲರಿಂಗ್ ಅಸೋಸಿಯೇಷನ್ ಕೋಟೇಶ್ವರ ಇದರ ಕಾರ್ಯದರ್ಶಿಯಾಗಿ, ತಾಲೂಕು ಮಟ್ಟದ ಟೈಲರಿಂಗ್ ಅಸೋಸಿಯೇಷನ್ ಆಡಳಿತ ಮಂಡಳಿಯ ಸದಸ್ಯರು.

ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘ (ರಿ) ಇದರ ಮಹಿಳಾ ವೇದಿಕೆಯ ಸಂಚಾಲಕರಾಗಿ ಹಲವಾರು ವರ್ಷಗಳ ಕಾಲ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದ್ದಾರೆ.

ಪತ್ನಿಗೆ ಸಾಥ್ ನೀಡುತ್ತಿರುವ ಪತಿ ಮಂಜುನಾಥ್ ಶೆಟ್ಟಿಗಾರ್

ಇವರು ಪಶು ವೈದ್ಯಕೀಯ ಇಲಾಖೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ 2014ರಲ್ಲಿ ಪಶು ವೈದ್ಯಕೀಯ ಹಿರಿಯ ಪಶು ವೀಕ್ಷಕರಾಗಿ ನಿವೃತ್ತರಾಗಿದ್ದಾರೆ.

ಸರಕಾರಿ ಸೇವೆಯಲ್ಲಿರುವಾಗ ಸ್ವ ಸಮಾಜದವರನ್ನು ಸೇರಿಸಿಕೊಂಡು ಕೊಟೇಶ್ವರ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘವನ್ನು ಕಟ್ಟಿ ಎರಡು ವರ್ಷ ಕೋಶಾಧಿಕಾರಿಯಾಗಿ 25 ವರ್ಷಗಳ ಕಾಲ ಸುದೀರ್ಘ ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮಾಜದಲ್ಲಿ ಬಹು ಸಂಖ್ಯಾತರ ದಬ್ಬಾಳಿಕೆ ವಿರುದ್ಧ ಸತತ ಹೋರಾಟ ಮಾಡಿದಲ್ಲದೆ. ಅನ್ಯಾಯಕ್ಕೆ ಒಳಗಾದ ಸಮಾಜದ ಏಳಿಗೆಗೆ ಹೋರಾಟದ ಧ್ವನಿಯಾಗಿದ್ದಾರೆ.

ಸದಾ ದುರ್ಬಲ ವರ್ಗದ ಸಮಾಜದವರಿಗೆ ಸಹಾಯ ಹಸ್ತ ರಾಗಿ ಸಮಾಜ ಸೇವೆ ಸಲ್ಲಿಸಿ ಸೈಎನಿಸಿಕೊಂಡಿದ್ದರು.

ಮೂಲತಃ ಸಾಲಿಕೇರಿ ನಿವಾಸಿಯಾದ ಇವರು 1984ರಲ್ಲಿ ಕೋಟೇಶ್ವರದಲ್ಲಿ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದರು.

ಸಾಲಿಕೇರಿ ಹಾರಾಡಿ ವಿದ್ಯಾ ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಪಡೆದು, ಗೋಳಿಯಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಅಭ್ಯಾಸ ಮಾಡಿ 1980ರಲ್ಲಿ ಪಶು ವೈದ್ಯಕೀಯ ಇಲಾಖೆಯಲ್ಲಿ ಕೆಲಸಕ್ಕೆ ಸೇರ್ಪಡೆಯಾಗಿ ನಾನಾ ಕಡೆ ಸೇವೆ ಸಲ್ಲಿಸಿ 2014ರಲ್ಲಿ ಸ್ವಯಂ ನಿವೃತ್ತಿ ಪಡೆದಿರುತ್ತಾರೆ.

ಇವರಿಗೆ ಪತ್ನಿ ಪ್ರೇಮ ಶೆಟ್ಟಿಗಾರ್ ಮಕ್ಕಳಾದ ಮನೋಜ್ ಕುಮಾರ್, ಪವನ್ ಕುಮಾರ್ ಸೊಸೆ ಸೌಜನ್ಯ, ಮೊಮ್ಮಗ ಸುಹಾನ್ ನೊಂದಿಗೆ ಸುಖೀ ಸಂಸಾರ ಇವರದು.

ಇವರು ವಧು- ವರರನ್ನು ಅನ್ವೇಷಣೆ ಮಾಡಿ ಹಲವಾರು ಜೋಡಿಗೆ ವಿವಾಹ ನೆರವೇರಿಸಿರುತ್ತಾರೆ. ಸಮಾಜದಲ್ಲಿನ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂಧಿಸಿ, ರಾಜಿ ಪಂಚಾಯಿತಿಯ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಮಾಡಿದ ಕೀರ್ತಿ ಇವರದು.

ಇವರ ಸಮಾಜ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಪುರಸ್ಕಾರ ನೀಡಿರುತ್ತಾರೆ.

ಸಂಪರ್ಕ ಸಂಖ್ಯೆ:9739327507

 

Related Articles

Back to top button
error: Content is protected !!