ಜ.24 ರಂದು ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ “ಶ್ರೀರಾಮ ಸೀತಾ ಲಕ್ಷ್ಮಣ ಹನುಮ ಪ್ರತಿಷ್ಠಾಪನೆ”

Views: 54
ಕುಂದಾಪುರ: ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಸಂಗಡಿಗರು ಅಯೋದ್ಯೆಗೆ ಹೋದಾಗ ರಥ ಸೇವೆ ನೀಡುವ ಕಷ್ಕಿಂದ ಹನುಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿ ಮಹಾರಾಜ್ ಅವರು ಶ್ರೀ ರಾಮಲಲ್ಲಾ ಬಾಲಾಲಯದಲ್ಲಿ ಇಟ್ಟು ಪೂಜಿಸಿ ನಮಗೆ ನೀಡಿದ ಪಾದುಕೆಯನ್ನು ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಸಿಯಲ್ಲಿ ಶ್ರೀ ರಾಮ ಸೀತೆ ಲಕ್ಷ್ಮಣ ಹನುಮ ಮೂರ್ತಿಯೊಂದಿಗೆ ನೂತವಾಗಿ ನಿರ್ಮಿಸಿದ ಶ್ರೀರಾಮ ಮಂದಿರದಲ್ಲಿ 24.01.2024 ರಂದು ಶ್ರೀ ಶ್ರೀ ಶ್ರೀ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ಆಶೀರ್ವಾದದೊಂದಿಗೆ , ವಿದ್ವಾನ ಪಂಜ ಶ್ರೀ ಭಾಸ್ಕರ ಭಟ್ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ
ಜ.22 ರಿಂದ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
22.01.2024ನೇ ಸೋಮವಾರ
ಅಯೋಧ್ಯ ಶ್ರೀ ರಾಮನ ಪ್ರತಿಷ್ಠೆ ಸಮಯದಲ್ಲಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡಿ ಬೆಳ್ಳಿರಥದಲ್ಲಿ ರಥೋತ್ಸವ ಜರುಗುವುದು,
ನಂತರ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಪೂಜೆಗೊಂಡು ನಂತರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ ತನಕ ಪೂಜೆಗೊಳ್ಳಲಿದೆ
ಪ್ರಾತ:ಕಾಲ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನೆ, ದ್ರವ್ಯಶುದ್ದಿ,ಗಣಯಾಗ,
ಸಾಯಂಕಾಲ: ರಾಕ್ಷೋಘ್ನ ಹೋಮ, ವಾಸ್ತು ಪೂಜೆ ,ವಾಸ್ತು ಬಲಿ ದಿಗ್ಬಲಿ
23.01.2024ನೇ ಮಂಗಳವಾರ
ಪ್ರಾತ:ಕಾಲ ನವಗ್ರಹ ಶಾಂತಿ ಬಿಂಬ ಶುದ್ಧಿ, ಕಲಶಾಧಿವಾಸ.
ಸಾಯಂಕಾಲ : ಧ್ಯಾನಾದಿಗಳು,ಅಧಿವಾಸ ಹೋಮ, ಶ್ರೀ ನಾಗ ಬಿಂಬಾಧಿವಾಸ ಪ್ರಕ್ರಿಯೆಗಳು
24.01 2024ನೇ ಬುಧವಾರ
ಪ್ರಾತ:ಕಾಲ 7:15 ರಿಂದ 8:15ರ ಮಕರ ಸುಮುಹೂರ್ತದಲ್ಲಿ

“ಶ್ರೀ ರಾಮ ಸೀತಾ ಲಕ್ಷ್ಮಣ ಹನುಮ” ದೇವರ ಪ್ರತಿಷ್ಠಾಪನೆ
ಈ ಸಂದರ್ಭದಲ್ಲಿ ಕಲಾಶಾಭಿಷೇಕ, ಶ್ರೀ ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ ಜರಗಲಿರುವುದು.
11 ಗಂಟೆಗೆ ಶ್ರೀ ಶ್ರೀ ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಅವರಿಂದ ಪ್ರಸನ್ನ ಪೂಜೆ
ಮಧ್ಯಾಹ್ನ 1:00ಕ್ಕೆ ‘ಅನ್ನ ಸಂತರ್ಪಣೆ’
ಈ ಪುಣ್ಯಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೇಬೇಕಾಗಿ ಅಪೇಕ್ಷಿಸುವ,
–ರಥ ಶಿಲ್ಪಿ ಬಿ.ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಮಕ್ಕಳು ಕೋಟೇಶ್ವರ.







