ಶಿಕ್ಷಣ

ಜ್ಞಾನಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಸಿಎ,ಸಿಎಸ್ ಹಾಗೂ ಸಿಎಮ್ ಎ ಓರಿಯಂಟೇಶನ್ ಕಾರ್ಯಕ್ರಮ

Views: 112

ಕನ್ನಡ ಕರಾವಳಿ ಸುದ್ದಿ: ಸಿದ್ಧಾಪುರ ಜ್ಞಾನಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ,ಸಿಎಸ್ ಹಾಗೂ ಸಿಎಮ್ ಎ ಓರಿಯಂಟೇಶನ್ ಪ್ರವೇಶ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಓರಿಯಂಟೇಶನ್ ಕಾರ್ಯಕ್ರಮ ಜುಲೈ 30 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ ಮಹೀಂದ್ರ ಶೆಣೈ, ಸಿಎಸ್ ಸಂತೋಷ್ ಪ್ರಭು ಅವರು ಭಾಗವಹಿಸಿ, ಈ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ತಯಾರಿ ವಿಧಾನಗಳು ಹಾಗೂ ವಿದ್ಯಾರ್ಥಿಗಳು ಅನುಸರಿಸಬಹುದಾದ ಅಭ್ಯಾಸ ಕ್ರಮಗಳ ಬಗ್ಗೆ ವಿಶ್ಲೇಷಣೆ ನೀಡಿದರು.

ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಮಾತನಾಡಿ, ಉತ್ತಮ ಅಭ್ಯಾಸ ಹಾಗೂ ಸಮಯದ ನಿಜವಾದ ಬಳಕೆ ಮೂಲಕ ಯಶಸ್ಸು ಸಾಧ್ಯವೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮುಖ ಎಜುಕೇಶನ್ ಟ್ರಸ್ಟ್‌‌ನ ಅಧ್ಯಕ್ಷರಾದ ಬಿ ಎಸ್ ಸುರೇಶ್ ಶೆಟ್ಟಿ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಮತ್ತು ಉಪಪ್ರಾಂಶುಪಾಲ ಹರ್ಷ ಶೆಟ್ಟಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಜಗದೀಶ್ ಇವರು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಹರ್ಷ ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಗಾಯತ್ರಿ ಸೋಮಯಾಜಿ ನಿರೂಪಿಸಿದರು, ನಾಗಶ್ರೀ ವಂದಿಸಿದರು.

Related Articles

Back to top button