ಜಿ-20 ಶೃಂಗಸಭೆ: 2 ಮೀಟರ್ ಉದ್ದದ ಬಟ್ಟೆಯ ಮೇಲೆ ವಿಶೇಷ ಕಲೆಯನ್ನು ಬಿಂಬಿಸಿದ ಕೈಮಗ್ಗ ನೇಕಾರ

Views: 0
ನವದೆಹಲಿ: ದೆಹಲಿಯಲ್ಲಿ ಎರಡು ದಿನದಿಂದ ನಡೆಯುತ್ತಿದ್ದ ಜಿ20 ಶೃಂಗಸಭೆ ಭಾನುವಾರ ಅಂತ್ಯವಾಗಿದೆ. ಜಿ-20 ಶೃಂಗಸಭೆ ಹಿನ್ನಲೆಯಲ್ಲಿ ತೆಲಂಗಾಣದ ಕೈಮಗ್ಗ ಕಾರ್ಮಿಕರೊಬ್ಬರು ತಮ್ಮ ಕೈಚಳಕ ತೋರಿದ್ದಾರೆ.
ತ್ರಿವರ್ಣ ರಾಷ್ಟ್ರಧ್ವಜ ಸೇರಿದಂತೆ ಜಿ20 ರಾಷ್ಟ್ರಗಳ ಅಧ್ಯಕ್ಷರ ಫೋಟೊಗಳ ಜತೆಗೆ ಭಾರತದ ಭೂಪಟದ ಚಿತ್ರವನ್ನು ಸಿರಿಸಿಲ್ಲ ಹರಿ ಪ್ರಸಾದ್ ಎಂಬುವವರು ಕೈಮಗ್ಗ ಮೂಲಕವಾಗಿ ನೈಪುಣ್ಯತೆ ಮೆರೆದಿದ್ದಾರೆ. ಹರಿ ಪ್ರಸಾದ್ ಎರಡು ಮೀಟರ್ ಉದ್ದದ ಬಟ್ಟೆಯ ಮೇಲೆ ವಿಶೇಷ ಕಲೆಯನ್ನು ಬಿಂಬಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
G20 ದೇಶದ ನಾಯಕರ ಚಿತ್ರ, ಎರಡು ಮೀಟರ್ ಬಟ್ಟೆಯ ಎರಡೂ ಬದಿಗಳಲ್ಲಿ G20 ಲೋಗೋ ಕಾಣಿಸಿಕೊಳ್ಳುವ ರೀತಿಯಲ್ಲಿ ಅವರು ಅದನ್ನು ಮಾಡಿದ್ದಾರೆ. ಒಂದು ವಾರ ಕಷ್ಟಪಟ್ಟು ಮುಗಿಸಿದ್ದಾರೆ. ಈ ಉಡುಪಿನ ಮೇಲೆ ರಾಷ್ಟ್ರೀಯ ನಾಯಕರ ಛಾಯಾಚಿತ್ರಗಳು ಆಕರ್ಷಕವಾಗಿವೆ. ಅವರು ಈ ಉಡುಪನ್ನು ಸಂಪೂರ್ಣವಾಗಿ ಮಗ್ಗದ ಮೇಲೆ ಕೈಯಿಂದ ಮಾಡಿದ್ದಾರೆ.
ಹರಿ ಪ್ರಸಾದ್ ಅವರು ಜಿ20 ಲೋಗೋವನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಿದ್ದರು. ಇದೀಗ ಜಿ20 ರಾಷ್ಟ್ರಗಳ ಉನ್ನತ ನಾಯಕರ ಫೋಟೋಗಳನ್ನು ತೋರಿಸಲು ಬಟ್ಟೆಯೊಂದನ್ನು ತಯಾರಿಸಿದ್ದಾರೆ. ಈ ಹಿಂದೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಿ20 ಲಾಂಛನದ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು ಎಂದು ಹರಿ ಪ್ರಸಾದ್ ಹೇಳುತ್ತಾರೆ.






