ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಇನ್ನಿಲ್ಲ!
Views: 209
ಕನ್ನಡ ಕರಾವಳಿ ಸುದ್ದಿ:ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿ ಸುದ್ದಿಯಲ್ಲಿದ್ದ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್, 7-8 ತಿಂಗಳ ಹಿಂದೆಯೇ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ.

ಉತ್ತರ ಪ್ರದೇಶ ಮೂಲದ ಸಂಜಯ್ ಬೆಂಗಳೂರಿಗೆ ಬಂದು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವೇಳೆ ಪರಿಚಯವಾಗಿದ್ದ ಪವಿತ್ರಾ ಗೌಡ ಜೊತೆ ಮದುವೆಯಾಗಿದ್ದರಂತೆ, ಬಳಿಕ ಕೆಲ ಕಾರಣಗಳಿಂದ ಇಬ್ಬರು ಡಿವೋರ್ಸ್ ಪಡೆದಿದ್ದರು.
ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಬೆಂಗಳೂರಿಗೆ ಬಂದು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವೇಳೆ ಪರಿಚಯವಾಗಿದ್ದ ಪವಿತ್ರಾ ಗೌಡ ಜೊತೆ ಲವ್ ಮ್ಯಾರೇಜ್ ಆಗಿದ್ದು, ಇಬ್ಬರಿಗೂ ಭಾಷೆ ಬರದಿದ್ದರೂ ಸನ್ನೆಗಳ ಮೂಲಕವೇ ಮಾತನಾಡಿಕೊಂಡು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಖುಷಿ ಎಂಬ ಮಗಳಿದ್ದರೂ, ಪವಿತ್ರಾ ಅವರಿಗೆ ಬಣ್ಣದ ಲೋಕಕ್ಕೆ ಕಾಲಿಡುವ ಆಸೆ ಹೆಚ್ಚಾದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ಸಂಜಯ್ ಸಿಂಗ್ ಅಗಲಿದ ವಿಚಾರ ಪವಿತ್ರಾ ಗೌಡ ಅವರಿಗೆ ತಡವಾಗಿ ತಿಳಿದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದ್ದು, ಸಂಜಯ್ ಸಿಂಗ್ ಅವರ ಹಠಾತ್ ಸಾವು ಎಲ್ಲರನ್ನೂ ಅಚ್ಚರಿಗೊಳಿಸಿದೆ






