ಸಾಮಾಜಿಕ

ಜನನ ಮರೆಮಾಚಲು ತಾಯಿ ಕೃತ್ಯ, ಆಸ್ಪತ್ರೆಯ ಶೌಚದಲ್ಲಿ ನವಜಾತ ಶಿಶು ಶವ ಪತ್ತೆ!

Views: 53

ಬೆಂಗಳೂರು,ನಗರದ ಹೊರವಲಯದಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಹೆತ್ತ ತಾಯಿಯೇ ನವಜಾತ ಶಿಶುವನ್ನು ಟಾಯ್ಲೆಟ್ಗೆ ಹಾಕಿ ಫ್ಲೆಶ್ ಮಾಡಿ ಕ್ರೂರಿಯಾಗಿ ವರ್ತಿಸಿದ್ದಾಳೆ.

ಹಾರೋಹಳ್ಳಿ ಸಮೀಪದ ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಬ್ಲಾಕ್ನ ಶೌಚ ಗುಂಡಿಯಲ್ಲಿ ಆಗತಾನೇ ಜನಿಸಿದ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಟಾಯ್ಲೆಟ್ನಲ್ಲಿ ನೀರು ಹೋಗದೆ ಕಟ್ಟಿಕೊಂಡಿದ್ದ ಹಿನ್ನಲೆಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲಿಸುತ್ತಿದ್ದಾಗ ನವಜಾತ ಶಿಶುವಿನ ಶವ ಗಮನಿಸಿ ತಕ್ಷಣ ವೈದ್ಯರಿಗೆ ತಿಳಿಸಿದ್ದಾರೆ.

ವೈದ್ಯರು ಬಂದು ನೋಡಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಮಗುವಿನ ಜನನ ಮರೆಮಾಚಲು ಕ್ರೂರಿ ತಾಯಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಮಗುವಿನ ಡಿಎನ್ಎ ವರದಿ ಆಧರಿಸಿ ಆರೋಪಿತೆಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Related Articles

Back to top button