ಚಲಿಸುತ್ತಿರುವ ಬೈಕ್ ಮೇಲೆಯೇ ಈ ಜೋಡಿಯ ರೊಮ್ಯಾನ್ಸ್!

Views: 220
ಕನ್ನಡ ಕರಾವಳಿ ಸುದ್ದಿ:ಚಲಿಸುವ ಬೈಕ್‌ನಲ್ಲಿ ಜೋಡಿ ರೊಮ್ಯಾನ್ಸ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಗೆ ಬಾರಿ ದಂಡ ವಿಧಿಸಿದ್ದಾರೆ.
ಈ ಘಟನೆ ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಯುವಕ ಮತ್ತು ಯುವತಿ ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ.ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಮೊದಲು ಅವರನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಅವರು ಅವನ ಮಾತನ್ನು ಕೇಳದಿದ್ದಾಗ, ಅವನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೊ ಪೊಲೀಸರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ. ನಂತರ ಪೊಲೀಸರು ಬೈಕ್‌ನಲ್ಲಿ ಪ್ರಣಯ ಮಾಡಿದ ಯುವಕ ಮತ್ತು ಯುವತಿಗೆ 53,000 ರೂ.ಗಳ ದಂಡ ವಿಧಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಯುವತಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮಲಗಿದ್ದಳು ಮತ್ತು ಯುವಕ ಬೈಕನ್ನು ಚಲಾಯಿಸುತ್ತಿದ್ದ. ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಜೋಡಿಯ ಈ ಅಪಾಯಕಾರಿ ಪ್ರಣಯವು ರಸ್ತೆ ಸುರಕ್ಷತೆಯ ಬಗ್ಗೆ ಕಳವಳವನ್ನುಂಟುಮಾಡಿದೆ. ಇಂತಹ ಅಜಾಗರೂಕತೆಯು ಅವರ ಜೀವಗಳನ್ನು ಮಾತ್ರವಲ್ಲದೆ ಇತರರ ಜೀವಗಳನ್ನು ಸಹ ಅಪಾಯಕ್ಕೆ ಸಿಲುಕಿಸುತ್ತದೆ.
ವಿಡಿಯೊ ನೋಡಿದ ನೆಟ್ಟಿಗರು ಈ ಜೋಡಿಯ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.