ಮಾಹಿತಿ ತಂತ್ರಜ್ಞಾನ

ಚಂದ್ರಯಾನ- 3 ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದ ವಿಕ್ರಂ ಲ್ಯಾಂಡರ್

Views: 0

ಆಗಸ್ಟ್ 23 ರಂದು ಚಂದಿರನ ಅಂಗಳಕ್ಕೆ ಕಾಲಿಡಲಿದೆ ಎಂದು ನಿರೀಕ್ಷಿಸಲಾದ ಭಾರತದ ವಿಕ್ರಂ ಲ್ಯಾಂಡರ್  ಐತಿಹಾಸಿಕ ಕ್ಷಣಕ್ಕೂ ಮುನ್ನ ನಡೆಸಲಾಗುವ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ.

ವಿಕ್ರಂ ಲ್ಯಾಂಡರ್ ತನ್ನ ಮೊದಲ ಡಿಬೂಸ್ಟರಿಂಗ್ ಆಪರೇಷನ್ಗೆ ಒಳಗಾಯಿತು.ಈ ಪ್ರಕ್ರಿಯೆಯು ಚಂದಿರನ ಹತ್ತಿರ ಕಕ್ಷೆಗೆ ಸೇರಿಸಲು ಅದನ್ನು ನಿಧಾನಗೊಳಿಸಿದೆ.

ಇಸ್ರೋ ಪ್ರಕಾರ ಲ್ಯಾಂಡರ್ ಮೊಡ್ಯೂಲ್ ಸ್ಥಿತಿ ಸಹಜವಾಗಿದ್ದು ಹಾಗೂ ಇದು ಕೈಗೊಳ್ಳಲಾದ ಮಹತ್ವದ ಹೆಜ್ಜೆಯಾಗಿದೆ. ಡಿಬೂಸ್ಟರ್ ಆಪರೇಷನ್ ಲ್ಯಾಂಡರ್ ಕಕ್ಷೆಯನ್ನು 113 ಕಿ.ಮೀ x 157 ಕಿ.ಮೀ ಕಡಿಮೆಗೊಳಿಸಿದೆ. ಇಂತಹ ಎರಡನೇ ಪ್ರಕ್ರಿಯೆ ಆಗಸ್ಟ್ 20 ರಂದು ನಡೆಯಲಿದೆ ಎಂದು ಇಸ್ರೋ ಹೇಳಿದೆ.

ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿರೀಕ್ಷೆಯಂತೆ ಅಗಸ್ಟ್ 23ರಂದು ಕಾಲಿಟ್ಟರೆ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಭಾರತ ಆಗಲಿದೆ.

Related Articles

Back to top button
error: Content is protected !!