ಮಾಹಿತಿ ತಂತ್ರಜ್ಞಾನ

ಚಂದ್ರಯಾನ- 3 ನೇರ ಪ್ರಸಾರ ಕಾರ್ಯಕ್ರಮದ ಆಯೋಜಿಸುವಂತೆ ಟಿವಿಗಳಿಗೆ ಕೇಂದ್ರದ ಕರೆ

Views: 0

ಚಂದ್ರಯಾನ- 3 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಸಂದರ್ಭ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲಾ ವಿವಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೇಳಿದೆ.

ಚಂದ್ರಯಾನ- 3 ಯೋಜನೆಯ ಲ್ಯಾಂಡಿಂಗ್ಸ್ ಪ್ರಕ್ರಿಯೆಯು ಸ್ಮರಣೀಯ ಸಂದರ್ಭವಾಗಿದೆ.

ಯುವಕರಲ್ಲಿ ಕುತೂಹಲ ಉಂಟುಮಾಡುದಷ್ಟೇ ಅಲ್ಲದೆ ಆವಿಷ್ಕಾರವನ್ನು ಎಲ್ಲರಿಗೂ ಪ್ರೇರೇಪಿಸಲಿದೆ.ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ನಮ್ಮಲ್ಲಿ ಗಾಡವಾದ ಹೆಮ್ಮೆಯ ಭಾವನೆ ಮೂಡಿಸಲಿದ್ದು ಎಲ್ಲರೂ ಒಂದಾಗಿ ಇರುವಂತೆ ಮೂಡಿಸಲಿದ್ದಾರೆ.

ಈ ಸಂದರ್ಭ ವೈಜ್ಞಾನಿಕ ಚಿಂತನೆ ಮತ್ತು ಅನ್ವೇಷಣಾ ಮನೋಭಾವನೆಗೆ ಇಂಬು ನೀಡಲಿದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗವು ಶೈಕ್ಷಣಿಕ ಸಂಸ್ಥೆಗಳಿಗೆ ಇದೇ ರೀತಿಯ ನಿರ್ದೇಶನವನ್ನು ನೀಡಿದೆ ಸಂಜೆ 5:30 ರಿಂದ 6:30ರ ವರೆಗೆ ನೇರ ಪ್ರಸಾರ ಆಯೋಜಿಸುವಂತೆ ತಿಳಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಾಹಿತಿ ಪ್ರಕಾರ ಚಂದ್ರಯಾನ ಯೋಜನೆಯ ವಿಕ್ರಂ ಲ್ಯಾಂಡರ್ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ದ್ರುವದ ಮೇಲೆ ಇಳಿಯಲಿದೆ. ಸಾಫ್ಟ್ ಲ್ಯಾಂಡಿಂಗ್ ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Related Articles

Back to top button