ಮಾಹಿತಿ ತಂತ್ರಜ್ಞಾನ
ಚಂದ್ರಯಾನ- 3 ಕುಂದಾಪುರ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರ ಸಾಧನೆಗೆ ಪ್ರಶಂಸೆ

Views: 2
ಚಂದ್ರಯಾನ- 3 ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆದ ಮೇಲೆ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಕುಂದಾಪುರದ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಸಕ್ರೀಯವಾಗಿ ತೊಡಗಿಸಿಕೊಂಡಿರುವುದು ಕುಂದಾಪುರದ ಜನತೆ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಯುವವಿಜ್ಞಾನಿ ಕುಂದಾಪುರ ತಾಲೂಕಿನ ಗುಜ್ಜಾಡಿ ಮಂಕಿ ಕೆಳಾಮನೆ ನಿವಾಸಿ ಆಕಾಶ್ ಶೆಟ್ಟಿ ಅವರು ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಕಾಶ್ ಶೆಟ್ಟಿ ಅವರುಕೋಟ ವಿವೇಕ ಹೈಸ್ಕೂಲ್ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ಬಳಿಕ ಇಂಜಿನಿಯರಿಂಗ್ ಹಾಗೂ ಎಮ್ ಟೆಕ್ ಪದವಿ ಪಡೆದುಕೊಂಡು 2015 ರಲ್ಲಿ ಇಸ್ರೋಗೆ ಸೇರ್ಪಡೆಯಾದರು.
ಪ್ರಸ್ತುತ ಅವರು ಮುರುಡೇಶ್ವರ ನಿವಾಸಿಯಾಗಿ, ಪಾರ್ವತಿ ಶೆಟ್ಟಿ ಹಾಗೂ ಕೆರಾಡಿ ಚಪ್ಪರಮಕ್ಕಿ ದಿ. ಅಶೋಕ್ ಶೆಟ್ಟಿ ಅವರ ಪುತ್ರ ರಾಗಿರುತ್ತಾರೆ