ಚಂದ್ರಯಾನ ಕಕ್ಷೆಯ ತೆಕ್ಕೆಗೆ ಚಂದ್ರಯಾನ ನೌಕೆ :ಇಸ್ರೋ ಇನ್ನೊಂದು ಯಶಸ್ವಿ ಮೈಲುಗಲ್ಲು

Views: 0
140 ಕೋಟಿ ಭಾರತೀಯರು ಕುತೂಹಲ ಉದ್ವೇಗದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ.
ಭಾರತದ ಮಹತ್ವಕಾಂಕ್ಷಿಯ ಚಂದ್ರಯಾನ -3 ಗಗನ ನೌಕೆಯ ಪಯಣ ಯಶಸ್ವಿಯಾಗಿ ಮುಂದುವರೆದಿದ್ದು, ಚಂದ್ರನ ಕಕ್ಷೆಗೆ ಶನಿವಾರ ಬಲು ಯಶಸ್ವಿಯಾಗಿ ಸೇರಿಕೊಂಡಿದೆ.
ಸಂಜೆಯ ನಂತರ ಭೂಕಕ್ಷೆಯಿಂದ ಬಲವಾಗಿ ಬಿಟ್ಟುಕೊಂಡು ಚಂದ್ರನ ನತ್ತ ನುಗ್ಗಿದ ನೌಕೆ ನಿಗದಿತ ಚಂದ್ರಕಕ್ಷೆಯನ್ನು ಪ್ರವೇಶಿಸಿ ಪ್ರದಕ್ಷಿಣೆ ಆರಂಭಿಸಿದೆ.
ಬೆಂಗಳೂರು ನಿಯಂತ್ರಣ ಕೇಂದ್ರದಿಂದ ಪೆರಿಲುನ್ ನಲ್ಲಿ ರೆಟ್ರೂ-ಬಿರ್ನಿಂಗ್ ಗೆ ಆದೇಶಿಸಲಾಯಿತು. ಮುಂದಿನ ಕಾರ್ಯಾಚರಣೆ ಅಗಸ್6 ರಂದು ಭಾನುವಾರ ನಡೆಯಲಿದೆ. ಚಂದ್ರನ ಕಕ್ಷೆಯಲ್ಲಿ ನೌಕೆಯನ್ನು ಸ್ಥಿರವಾಗಿ ಉಳಿಸುವ ಕಾರ್ಯ ನಡೆಯಲಿದೆ.
ಚಂದ್ರ ಕಕ್ಷೆಯಲ್ಲಿ ಐದು ಸುತ್ತು ಹಾಕಲಿದೆ. ಬಳಿಕ ಅಗಸ್ಟ್ 23ರ ಸಂಜೆ ಚಂದ್ರನ ದಕ್ಷಿಣ ದ್ರುವದಲ್ಲಿ ಮೃದುವಾಗಿ ಇಳಿಯಲಿದೆ.
ಆಕಾಶ ಕಾಯವು ಯಶಸ್ವಿಯಾಗಿ ಚಂದ್ರನ ಗುರುತ್ವಾಕರ್ಷಣೆಗೆ ಒಳಪಟ್ಟು ಇದರ ಕಕ್ಷೆಯಲ್ಲಿ ಸುತ್ತು ಬರುವವರೆಗೂ ಈ ಪ್ರಕ್ರಿಯೆಯನ್ನು ಬಲು ಜಾಗೃತಿಯಿಂದ ಜರಗಿಸಲಾಗುತ್ತದೆ.ಇದು ಚಂದ್ರ ನಡೆಗಿನ ಪಯಣದಲ್ಲಿನ ಮಹತ್ವದ ಘಟ್ಟವಾಗಿದೆ






