ಯುವಜನ

ಕೋಟ: ಚಿತ್ರಕಲಾವಿದ, ಕಾಲೇಜು ವಿದ್ಯಾರ್ಥಿ ವಿವೇಕ್ ಭಟ್ ಸಾವು 

Views: 351

ಕನ್ನಡ ಕರಾವಳಿ ಸುದ್ದಿ:ಚಿತ್ರಕಲೆ, ಮರಳು ಶಿಲ್ಪದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅದ್ಭುತ ಚಿತ್ರಕಲಾವಿದ ಸಾಲಿಗ್ರಾಮ ವಾಸುದೇವ ಭಟ್ ಅವರ ಪುತ್ರ ವಿವೇಕ್ ಭಟ್ (20)ಡಿ. 14ರಂದು ನಿಧನರಾದರು.

ಬ್ರಹ್ಮಾವರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಓದಿನ ಜತೆಗೆ ಚಿತ್ರಕಲೆ, ಮರಳುಶಿಲ್ಪ ರಚನೆ ಮೊದಲಾದ ಕಲೆಗಳಲ್ಲಿ ಹೆಸರುವಾಸಿಯಾಗಿದ್ದರು. ತಂದೆ ಎಲೆಕ್ನಿಷಿಯನ್ ಆಗಿದ್ದಾರೆ. ವಿವೇಕ ಹೆತ್ತವರ ಎಕೈಕ ಪುತ್ರ.

ವಿವೇಕ್ ಭಟ್ ಅವರು ಕಲೆಯ ಲೋಕದಲ್ಲಿ, ಚಿತ್ರಕಲೆ, ಮರಳು ಶಿಲ್ಪ ದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ ಅದ್ಭುತ ಚಿತ್ರಕಲಾವಿದರಾಗಿದ್ದರು. ಅವರ ಸೃಜನಶೀಲತೆ ಮತ್ತು ಮುಗ್ಧ ಕಲಾಪ್ರತಿಭೆ ವೀಕ್ಷಕರಿಗೆಲ್ಲಾ ಸ್ಫೂರ್ತಿಯಾಗಿತ್ತು.

Related Articles

Back to top button