ಕೋಟೇಶ್ವರ ರೋಟರಿ ಕ್ಲಬ್ ಮತ್ತು ಆನ್ಸ್ ಕ್ಲಬ್: ಮಹಿಳೆಯರ ಆರೋಗ್ಯ ತಪಾಸಣೆ ಶಿಬಿರ
Views: 30
ಕನ್ನಡ ಕರಾವಳಿ ಸುದ್ದಿ: ರೋಟರಿ ಕ್ಲಬ್ ಮತ್ತು ಆನ್ಸ್ ಕ್ಲಬ್ ಕೋಟೇಶ್ವರ ಮತ್ತು ಶ್ರೀ ಓಂಕಾರ್ ಕ್ಯಾಶು ಯಡಾಡಿ- ಮತ್ಯಾಡಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಉಡುಪಿ ಇವರ ಸಂಯೋಗದೊಂದಿಗೆ ಬೃಹತ್ ಮಹಿಳೆಯರ ಆರೋಗ್ಯ ತಪಾಸಣೆ ಶಿಬಿರವನ್ನು ಓಂಕಾರ ಕ್ಯಾಶೂಸ್ ಯಡಾಡಿ -ಮತ್ಯಾಡಿ ಇಲ್ಲಿ ಆಯೋಜಿಸಲಾಗಿದೆ.
ಮಹಿಳೆಯರಲ್ಲಿ ಮೂಡಿ ಬರುವ ಗರ್ಭಾಶಯದ ಅಸಹಜ ರಕ್ತಸ್ರಾವದ ಬಗ್ಗೆ ಮಾಹಿತಿಯನ್ನು ಡಾ. ಸರಿತಾ ಸಹಾಯಕ ಪ್ರಾಧ್ಯಾಪಕರು ಮತ್ತು ಡಾಕ್ಟರ್ ಅನಿಲ್ ಶೆಟ್ಟಿ ಹಿರಿಯ ಸಂಶೋಧಕರು ಮಹಿಳೆಯರಿಗೆ ಅರಿವನ್ನು ಮೂಡಿಸಿ, ಪ್ರಾಸ್ತಾವಿಕವಾಗಿ ಮಾತುಗಳಾಡಿದರು. ಈ ರೋಗಕ್ಕೆ ಸಂಬಂಧಿಸಿದ ರೋಗಿಗಳಿಗೆ ಉಚಿತ ತಪಾಸಣೆ ಮತ್ತು ಔಷಧಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದರು.
ಈ ಶಿಬಿರದ ಮೂಲಕ ಸುಮಾರು150ಕ್ಕೂ ಹೆಚ್ಚಿನ ಮಹಿಳೆಯರು ಶಿಬಿರದ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಆನ್ಸರ್ ಅಧ್ಯಕ್ಷೆ ರೇವತಿ ಪ್ರಭಾಕರ್ ಸ್ವಾಗತಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಓಂಕಾರ್ ಕ್ಯಾಶ್ ಯೂಸ್ ಮಾಲಿಕ ರೊಟೇರಿಯನ್ ಗಜೇಂದ್ರ ಶೆಟ್ಟಿ ಅವರು ನಡೆಸಿಕೊಟ್ಟರು. ರೋಟರಿ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ ವಹಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ದೀಪಿಕಾ ಶೆಟ್ಟಿ ಮತ್ತು ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ ಹಾಗೂ ರೋಟರಿ ಸದಸ್ಯರು ಆನ್ಸ್ ಸದಸ್ಯರು ಉಪಸ್ಥಿತದೊಂದಿಗೆ ಅಕ್ಷತಾ ಗಿರೀಶ ಕಾರ್ಯಕ್ರಮವನ್ನು ನಿರೂಪಿಸಿ, ದೀಪಿಕಾ ವಂದಿಸಿದರು.






