ಆರ್ಥಿಕ

ಕುಂದಾಪುರ: ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 16 ಲಕ್ಷ ರೂ.ವಂಚನೆ

Views: 230

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಡೇರಹೋಬಳಿ ಗ್ರಾಮದ ಸಿಸಿಲಿ ಅವರ ಪುತ್ರ ಸುನಿಲ್ ಅವರಿಗೆ ಮಂಗಳೂರಿನ ಯುಕೆ ಇನ್ ರೀಗಲ್ ಅಕಾಡೆಮಿ ಸಂಸ್ಥೆಯು ಉದ್ಯೋಗದ ವೀಸಾ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರು16 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.

ಫೇಸ್‌ಬುಕ್‌ನಲ್ಲಿ ಪ್ರಕಟವಾದ ಜಾಹೀರಾತನ್ನು ನೋಡಿದ ಸುನಿಲ್ ಉದ್ಯೋಗಕ್ಕಾಗಿ ಲಂಡನ್ ವೀಸಾ ಪಡೆಯಲು ಸಂಪರ್ಕಿಸಿದಾಗ 16 ಲಕ್ಷ ರೂ. ನೀಡಿದಲ್ಲಿ 90 ದಿವಸದಲ್ಲಿ ವೀಸಾ ಮಾಡಿಕೊಡುವ ಭರವಸೆ ನೀಡಿದ್ದರು. ಕೊಡಿಯಾಲ್‌ಬೈಲ್‌ನ ಕಚೇರಿಗೆ ಹೋದಾಗ ಆರೋಪಿ ಸೂರಜ್ ಜೋಸೆಫ್ 2 ಲಕ್ಷ ರೂ. ನಗದನ್ನು ಮುಂಗಡವಾಗಿ ಪಡೆದು ದಾಖಲೆಗಳನ್ನು ಪರಿಶೀಲಿಸಿ, 16 ಲಕ್ಷ ರೂ.ಗಳನ್ನು ಕೂಡಲೇ ಕೊಡುವಂತೆ ಪದೇ ಪದೆ ಕರೆ ಮಾಡಿದ್ದು ಕೊಡದಿದ್ದರೆ ವೀಸಾ ರದ್ದಾಗುತ್ತದೆ ಎಂದು ಹೇಳುತ್ತಿದ್ದರು. ಬ್ಯಾಂಕ್ ಮೂಲಕ 16 ಲಕ್ಷ ರೂ. ನೀಡಿದರೂ ವೀಸಾ ಕೊಡಿಸಲಿಲ್ಲ. ಹಣವನ್ನೂ ಮರಳಿ ಕೇಳಿದಾಗ ಚೆಕ್ ನೀಡಿದ್ದು, ಅದು ನಗದಾಗಲಿಲ್ಲ ಎಂದಿದ್ದಾರೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದೂರು ದಾಖಲಾಗಿದೆ.

Related Articles

Back to top button
error: Content is protected !!