ಕೃಷಿ

ಕುಂದಾಪುರ: ವಾರಾಹಿ ಕಾಲುವೆಗೆ ತಕ್ಷಣ ನೀರು ಹರಿಸುವಂತೆ ಮನವಿ 

Views: 38

ಕನ್ನಡ ಕರಾವಳಿ ಸುದ್ದಿ: ವಾರಾಹಿ ಕಾಲುವೆಗೆ ತಕ್ಷಣ ನೀರು ಹರಿಸುವಂತೆ ಮಧ್ಯ ಪ್ರವೇಶ ಮಾಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಭಾರೀ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪತ್ರ ಬರೆದಿದ್ದಾರೆ.

2014ನೇ ಸಾಲಿನಲ್ಲಿ ವಾರಾಹಿ ಯೋಜನೆ ಉದ್ಘಾಟನೆಗೊಂಡು ಕಾಲುವೆಗೆ ನೀರು ಹರಿಸಲಾಗಿತ್ತು. ಪ್ರಾರಂಭದ ಎರಡು ವರ್ಷದಲ್ಲಿ ಖಾಸಗಿಯವರ ಹಿತಾಸಕ್ತಿಗೆ ಕಾಲುವೆಗೆ ನೀರು ಹಾಯಿಸಲು ಅನಗತ್ಯ ವಿಳಂಬ ಮಾಡುತ್ತಿದ್ದರು. 2016ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಮನವಿ ಮೇರೆಗೆ ಅಂದಿನ ನೀರಾವರಿ ಸಚಿವರು ಈ ವಿಚಾರದ ಕುರಿತು ಅಧಿಕಾರಿಗಳ ಜನಪ್ರತಿನಿಧಿಗಳ ಮತ್ತು ರೈತರ ಸಭೆ ಕರೆದು ಡಿಸೆಂಬರ್ 1ಕ್ಕೆ ನೀರು ಹಾಯಿಸಬೇಕು ಎಂದು ಆದೇಶಿಸಿದ್ದರು.

ಜಿಲ್ಲಾಧಿಕಾರಿಯವರಿಗೆ ಪ್ರತಿವರ್ಷ ಈ ಬಗ್ಗೆ ಗಮನಹರಿಸಬೇಕೆಂದು ಇಲಾಖೆ ಆದೇಶ ಮಾಡಿದ್ದರು. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಕಾಲುವೆಗೆ ನೀರು ಹಾಯಿಸಲಾಗುತ್ತಿತ್ತು.

ಈ ವರ್ಷ ಈತನಕ ಕಾಲುವೆಗೆ ನೀರು ಹಾಯಿಸಿಲ್ಲ ಯಾವಾಗ ನೀರು ಹಾಯಿಸಲಾಗುವುದೆಂದು ಪ್ರಕಟಣೆ ನೀಡಿಲ್ಲ ಈಗಾಗಲೇ ಹಿಂಗಾರು ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ ಆದ್ದರಿಂದ ಕೂಡಲೇ ಮಧ್ಯ ಪ್ರವೇಶಿಸಿ ತತ್ ತಕ್ಷಣ ವಾರಾಹಿ ಕಾಲುವೆಗೆ ನೀರು ಹಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಮನವಿ ಮಾಡಿದ್ದಾರೆ.

Related Articles

Back to top button