ಧಾರ್ಮಿಕ
ಕುಂದಾಪುರ ವಡೇರಹೋಬಳಿ ದೇವಸ್ಥಾನಕ್ಕೆ ನುಗ್ಗಿ ಹುಂಡಿಯ ಹಣ, ಪೂಜಾ ಸಾಮಗ್ರಿ ಕಳ್ಳತನ

Views: 81
ಕುಂದಾಪುರ: ವಡೇರಹೋಬಳಿ ಶ್ರೀ ಯಕ್ಷೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ, ಕಾಣಿಕೆ ಹುಂಡಿಯಲ್ಲಿದ್ದ ಹಣ, ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬೆಳಿಗ್ಗೆ 10ಕ್ಕೆ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ, ಚಿಲಕ ಹಾಕಿ ತೆರಳಿರುತ್ತಾರೆ. ಅದೇ ದಿನ ಅಪರಾಹ್ನ 3 ಗಂಟೆ ಸುಮಾರಿಗೆ ದೇವಸ್ಥಾನದ ಕಾರ್ಯದರ್ಶಿ ಸಂತೋಷ್ ಬಂದು ನೋಡಿದಾಗ ಕಾಣಿಕೆ ಹುಂಡಿ ಕಳವಾಗಿರುವುದು ತಿಳಿದುಬಂದಿದೆ.
2 ಕೆ.ಜಿ. ತೂಕದ 5 ಸಾ.ರೂ. ಮೌಲ್ಯದ ತಾಮ್ರದ ಕೊಡಪಾನ, 6 ಕೆ.ಜಿ. ತೂಕದ 10 ಸಾ. ರೂ. ಮೌಲ್ಯದ ಹಿತ್ತಾಳೆ ದೀಪ, 15 ಸಾ.ರೂ. ನಗದು ಸಹಿತ 30 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯ ಮಂಜುನಾಥ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






