ರಾಜಕೀಯ
ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ಜಾಕೋಬ್ ಡಿಸೋಜ ನಿಧನ

Views: 90
ಕುಂದಾಪುರ: ಕಾಂಗ್ರೆಸ್ಸಿನ ಹಿರಿಯ ನಾಯಕ, ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ಜಾಕೋಬ್ ಡಿಸೋಜಾರವರು ಇಂದು ಬೆಳಿಗ್ಗೆ ನಿಧನರಾದರು.
ಕಾಂಗ್ರೇಸ್ಸಿನ ಕಾರ್ಯಕರ್ತರಾಗಿ, ಕುಂದಾಪುರ ಪುರಸಭೆಯ ಸದಸ್ಯರಾಗಿ, ಪುರಸಭೆಯ ಉಪಾಧ್ಯಕ್ಷರಾಗಿ, ರೋಜರಿ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷರಾಗಿ ಹಾಗೂ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.






