ಕುಂದಾಪುರ: ನಾಪತ್ತೆಯಾದ ಮಹಿಳೆ ವಾಪಾಸು ಮನೆಗೆ

Views: 0
ಕನ್ನಡ ಕರಾವಳಿ ಸುದ್ದಿ: ನಾಪತ್ತೆಯಾಗಿದ್ದ ಇಲ್ಲಿನ ವಿಠಲವಾಡಿ ನಿವಾಸಿ ಹೀನಾ ಕೌಸರ್ (32) ಮರಳಿ ಮನೆಗೆ ಬಂದಿದ್ದಾರೆ. ಜೂ.10 ರಂದು ಕೋಡಿ ಸೇತುವೆಯಲ್ಲಿ ಅವರ ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಪತ್ತೆಯಾಗಿತ್ತು. ಈ ಕಾರಣಕ್ಕೆ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಹಿನ್ನೆಲೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಸೋಮವಾರ ಮನೆಗೆ ಅವರು ವಾಪಸಾಗಿದ್ದಾರೆ.
ಕೋಡಿ ಸೇತುವೆ ಬಳಿ ಸ್ಕೂಟಿಯಲ್ಲಿ ಡೆತ್ ನೋಟ್ ಇರಿಸಿ ನಾಪತ್ತೆಯಾಗಿದ್ದ ಅವರು, ತಮ್ಮ ಕಥೆಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.ಅವರು ಹೇಳುವ ಪ್ರಕಾರ ಅಬಿದಾ ಎಂಬಾಕೆಯ ಟಾರ್ಚ‌್ರನಿಂದ ಡಿಪ್ರೆಶನ್‌ಗೆ ಒಳಗಾಗಿದ್ದೆ. ಹಾಗಾಗಿ ಆತ್ಮಹತ್ಯೆ ಮಾಡಲು ಬೆಳ್ಳಂಬೆಳ್ಳಗ್ಗೆ ಕೋಡಿ ಸೇತುವೆ ಬಳಿ ಹೋದೆ. ಅಲ್ಲಿ ನದಿಗೆ ಜಿಗಿಯಲು ಹೊರಟಾಗ ಮೀನುಗಾರರಿದ್ದ ಕಾರಣ ಮನಸ್ಸು ಬದಲಿಸಿ ಮಂಗಳೂರಿಗೆ ಹೋದೆ. ಅಲ್ಲಿಂದ ಉಳ್ಳಾಲ ದರ್ಗಾ ಸೇರಿಕೊಂಡೆ ಎಂದಿದ್ದಾರೆ.
ನಾಪತ್ತೆ ಬೆನ್ನಲ್ಲೇ ಸಾಹಿಲ್ ಎಂಬಾತ ಕಾಣೆಯಾಗಿದ್ದ ಏನಾದರೂ ಲಿಂಕ್ ಇದೆಯಾ ಎಂಬ ಪ್ರಶ್ನೆಗೆ, ನನಗೂ ಅದಕ್ಕೂ ಸಂಬಂಧವಿಲ್ಲ. ಅವನೆಲ್ಲಿದ್ದಾನೆ ಅಂತಾ ನಂಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಹೆಮ್ಮಾಡಿಯ ಸಾಹಿಲ್ ಕೂಡ ಮನೆಗೆ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.